ಹುಲ್ಲಿನ ಮೆದೆಗೆ ಕಾಡಾನೆಗಳ ದಾಳಿ

ಪೊನ್ನಂಪೇಟೆ: ಕಾಡಾನೆಗಳ ಹಿಂಡೊಂದು ಹುಲ್ಲಿನ ಮೆದೆಗೆ ದಾಳಿ ಮಾಡಿ ನಾಶಗೊಳಿಸಿವೆ.
ಭಾನುವಾರ ರಾತ್ರಿ ಕಿರುಗೂರು ಗ್ರಾಮದ ಕೃಷಿಕ ಕಾಕೇರ ರವಿ ಎಂಬುವವರು ಸಂಗ್ರಹಿಸಿಟ್ಟಿದ ಹುಲ್ಲು ನಾಶ ಮಾಡಿವೆ. ಸುಮಾರು 800 ಹುಲ್ಲಿನ ಕಂತೆ ನಾಶವಾಗಿದ್ದು, ಸುಮಾರು ₹18 ಸಾವಿರ ಹಣ ನಷ್ಟ ಉಂಟಾಗಿದೆ ಎಂದು ಕೃಷಿಕ ರವಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿರುವ ಮೂರು ಕಾಡಾನೆಗಳು ರಾತ್ರಿ ಹುಲ್ಲಿನ ಮೆದೆಗೆ ದಾಳಿ ನಡೆಸಿವೆ. ಇದರಿಂದ ಸಾಕಷ್ಟು ಹುಲ್ಲು ಕೆಸರಿನಲ್ಲಿ ಹೂತು ಹೋಗಿವೆ. ಒಂದಷ್ಟು ಹುಲ್ಲು ನೀರಿನಲ್ಲಿ ತೋಯ್ದು ಹೋಗಿರುವುದರಿಂದ ಸಂಗ್ರಹಿಸಲು ತೊಂದರೆಯಾಗುತ್ತಿದೆ. ಜಾನುವಾರುಗಳು ಅಹಾರ ಕಳೆದುಕೊಂಡಿದೆ.
ಕಾಡಾನೆಗಳ ಉಪಟಳ ಗ್ರಾಮದಲ್ಲಿನ ತೋಟಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಕೊರಕುಟ್ಟೀರ ಬೇಬಿ ನಂಜಪ್ಪ, ಪಡಿಞರಂಡ ಗಿರೀಶ್ ಎಂಬುವವರಿಗೆ ಸೇರಿದ ತೋಟದಲ್ಲಿನ ಬಾಳೆ ಗಿಡಗಳನ್ನು ಕೂಡ ನಾಶ ಮಾಡಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.