ನಾಪೋಕ್ಲು: ಶಿವರಾತ್ರಿ ಉತ್ಸವಕ್ಕೆ ಇಲ್ಲಿನ ದೇವಾಲಯಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಭಾಗಮಂಡಲದ ಭಗಂಡೇಶ್ವರ ದೇವಾಲಯ, ಪೇರೂರಿನ ಇಗ್ಗುತ್ತಪ್ಪ ದೇವಾಲಯ, ಪಾಲೂರಿನ ಮಹಾಲಿಂಗೇಶ್ವರ ದೇವಾಲಯ, ಈಸ್ಟ್ ಕೊಳಕೇರಿಯ ಮಹಾದೇವ ಕೋಟ, ಹೊದ್ದೂರು ಗ್ರಾಮದ ಶಾಸ್ತಾ ಈಶ್ವರ ದೇವಾಲಯ ಸೇರಿದಂತೆ ವಿವಿಧ ಶಿವ ದೇವಾಲಯಗಳು ಭಕ್ತರನ್ನು ಸೆಳೆಯುತ್ತಿವೆ.

ಕನ್ನಿಕೆ, ಕಾವೇರಿ, ಸುಜ್ಯೋತಿಗಳ ಸಂಗಮದಿಂದ ತ್ರಿವೇಣಿ ಸಂಗಮ ಎಂದೇ ಪ್ರಸಿದ್ಧವಾಗಿರುವ ಭಾಗಮಂಡಲದಲ್ಲಿ ಭಗಂಡೇಶ್ವರ ದೇಗುಲದಲ್ಲಿ ದಿನವಿಡಿ ವಿಶೇಷ ಪೂಜಾ ಕೈಂಕರ್ಯ ನಡೆಯಲಿವೆ.

ಕೊಡಗಿನ ಮಾತೆಯಾಗಿ ಕಾವೇರಿ ಖ್ಯಾತಿ ಪಡೆದಿದ್ದರೆ, ಆರಾಧ್ಯದೈವವಾಗಿ ಇಗ್ಗುತ್ತಪ್ಪ ಕೊಡಗಿನ ಜನತೆಯ ಮನಮಂದಿರದಲ್ಲಿ ನೆಲೆಸಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ಮೂರು ಇಗ್ಗುತ್ತಪ್ಪ ದೇವಾಲಯಗಳಿವೆ. ಕಕ್ಕಬ್ಬೆ, ನೆಲಜಿ ಮತ್ತು ಪೇರೂರಿನ ಇಗ್ಗುತ್ತಪ್ಪ ದೇವಾಲಯಗಳು ಭಕ್ತಜನರ ನಂಬಿಕೆಯ ತಾಣಗಳಾಗಿವೆ.

ಪೇರೂರಿನಲ್ಲಿರುವ ಬಲ್ಲತ್ತನಾಡು ಪೆರ್ಮೆ ಈಶ್ವರ ಇಗ್ಗುತ್ತಪ್ಪ ದೇವಾಲಯದಲ್ಲಿ ಪ್ರತಿವರ್ಷ ಶಿವರಾತ್ರಿಯ ದಿನದಂದು ವಾರ್ಷಿಕ ಉತ್ಸವ ಜರುಗುತ್ತದೆ. ಇನ್ನಿತರ ಧಾರ್ಮಿಕ ಉತ್ಸವಗಳನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದರೊಂದಿಗೆ ಪಾಡಿ ಹಾಗೂ ನೆಲಜಿ ಗ್ರಾಮಗಳ ಕಲ್ಲಡ್ಚ ಹಬ್ಬ ಪ್ರಸಿದ್ದ. ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಈ ಹಬ್ಬಕ್ಕೆ ದೇವಾಲಯಗಳು ಸಜ್ಜಾಗುತ್ತಿವೆ.

ಜಿಲ್ಲೆಯ ದೇವಾಲಯಗಳ ಪೈಕಿ ವೈಶಿಷ್ಟ್ಯಪೂರ್ಣವಾಗಿ ಗಮನೆ ಸೆಳೆಯುವ ಪಾಲೂರು ಮಹಾಲಿಂಗೇಶ್ವರ ದೇವಾಲಯವು ಕಾವೇರಿ ನದಿ ತಟದಲ್ಲಿದ್ದು, ಅತ್ಯಂತ ಪ್ರಾಚೀನವಾದ ದೇವಾಲಯವಾಗಿರುವುದಲ್ಲದೆ ತನ್ನದೇ ಇತಿಹಾಸ ಹೊಂದಿದೆ.

ಮಹಾಲಿಂಗೇಶ್ವರ ದೇವಾಲಯವನ್ನು ಕ್ರಿ.ಶ 11ನೇ ಶತಮಾನಕ್ಕೆ ಹಿಂದೆಯೇ ನಿರ್ಮಿಸಲಾಗಿದ್ದು, ಇದಕ್ಕೆ ಪೂರಕವಾಗಿ ಈ ದೇವಾಲಯದಲ್ಲಿ ಕ್ರಿ.ಶ 11ನೇ ಶತಮಾನದ ಶಿಲಾಶಾಸನವಿದ್ದು, ಅದರಲ್ಲಿ ಪಾಲಯೂರು ಎಂದು ಬರೆಯಲಾಗಿದೆ. ಈ ದೇವಾಲಯದ ಆದಿದೈವ ಪಾಲೂರಪ್ಪ. ಈ ದೇವಾಲಯದಲ್ಲಿ ಶಿವರಾತ್ರಿ ಅಚರಣೆ ಸಂಭ್ರಮದಿಂದ ಜರುಗುತ್ತದೆ.

ಈಸ್ಟ್ ಕೊಳಕೇರಿಯ ಬಿದ್ದಾಟಂಡ ವಾಡೆ ಸಮೀಪದಲ್ಲಿರುವ ಮಹಾದೇವ ಕೋಟ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದೆ. ದೇವಾಲಯದಲ್ಲಿ ಫೆ.15ರಂದು ಬೆಳಿಗ್ಗೆ 9ಯಿಂದ 11ರವರೆಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳು ನಡೆಯಲಿವೆ. ಮಧ್ಯಾಹ್ನ 12ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ನಾಲ್ಕುನಾಡು ವ್ಯಾಪ್ತಿಯ ಇನ್ನೂ ಹಲವು ದೇವಾಲಯಗಳು ಶಿವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿವೆ.

ಸಮೀಪದ ಪೇರೂರು ಗ್ರಾಮದ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ಮಹಾಶಿವರಾತ್ರಿ ದಿನದಂದು ವಾರ್ಷಿಕೋತ್ಸವ ನಡೆಯಲಿದೆ. ಅಂದು ದೇವಾಲಯದಲ್ಲಿ ತುಲಾಭಾರ, ಮಹಾಪೂಜೆ, ಅನ್ನಸಂತರ್ಪಣೆ, ದೇವರ ನೃತ್ಯಬಲಿ ನಡೆಯಲಿದೆ.

ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪೂಜೆ

ಭಾಗಮಂಡಲದಲ್ಲಿರುವ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿಯೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 7 ಗಂಟೆಗೆ ಶತರುದ್ರಾಭಿಷೇಕ ಬೆಳಿಗ್ಗೆ 9.30ಕ್ಕೆ ರುದ್ರಹೋಮ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ದೇವರ ಉತ್ಸವ ಪ್ರಸಾದ ವಿತರಣೆ ಅನ್ನ ಸಂತರ್ಪಣೆ. ಸಂಜೆ 5.30ರಿಂದ ಭಜನೆ ಮತ್ತು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 6 ಗಂಟೆಗೆ ತಾಯಂಬಕ ಸೇವೆ ಸಂಜೆ 6.30ಕ್ಕೆ ಲಕ್ಷದೀಪೋತ್ಸವ ಏಕಾದಶ ರುದ್ರಾಭಿಷೇಕ ಸಂಜೆ 7.30ಕ್ಕೆ ಮಹಾಮಂಗಳಾರತಿ ದೇವರ ನೃತ್ಯ ಉತ್ಸವ ಲಘು ಉಪಹಾರ. ರಾತ್ರಿ 10.30ಕ್ಕೆ ದೇವರ ತ್ರಿವೇಣಿ ಸಂಗಮ ಭೇಟಿ ಮತ್ತು ಬಾಣಬಿರುಸು ಕಾರ್ಯಕ್ರಮ. ರಾತ್ರಿ 11ಗಂಟೆಗೆ ದಕ್ಷಿಣ ಕನ್ನಡಜಿಲ್ಲೆಯ ಬಂಟ್ವಾಳದ ದರ್ಬೆಯ ಯಕ್ಷ ಕಾವ್ಯ ತರಂಗಿಣಿ ಭಾಗವತ ದಿ.ಚಂದಪ್ಪ ಪೂಜಾರಿ ಪ್ರತಿಷ್ಠಾನದಿಂದ ಸಂದ್ಯಾ ಪೂಜಾರಿ ದರ್ಬೆ ಅವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ- ಪ್ರಸಂಗ ‘ಓಂ ನಮಃ ಶಿವಾಯ’ ನಡೆಯಲಿದೆ. ತಲಕಾವೇರಿ ದೇವಾಲಯದಲ್ಲಿ ಬೆಳಿಗ್ಗೆ 9.30ಕ್ಕೆ ಶತರುದ್ರಾಭಿಷೇಕ ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿತರಣೆ. ಸಂಜೆ 7 ಗಂಟೆಗೆ ಏಕಾದಶ ರುದ್ರಾಭಿಷೇಕ ಮಹಾ ಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.