ಸಿದ್ದಾಪುರ ಬಸ್‌ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಸಾರ್ವಜನಿಕ ಶೌಚಾಲಯ
ನೆಲ್ಯಹುದಿಕೇರಿ ಬಸ್‌ತಂಗುದಾಣ
ಸಿದ್ದಾಪುರದಲ್ಲಿ ಬಸ್ ನಿಲ್ಲುವ ಜಾಗ
ಸಿದ್ದಾಪುರದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಒಟ್ಟಿಗೆ ನಿಲ್ಲುತ್ತವೆ
ಗಾಳಿ, ಮಳೆಯಿಂದ ಇಲ್ಲ ಪ್ರಯಾಣಿಕರಿಗೆ ರಕ್ಷಣೆ ಸಿದ್ದಾಪುರದ ಶೌಚಾಲಯದ ಸ್ವಚ್ಛತೆಗಾಗಿ ಪ್ರಯಾಣಿಕರ ಒತ್ತಾಯ ಬಸ್‌ನಿಲ್ದಾಣ ನಿರ್ಮಿಸುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆ

ಸಾರ್ವಜನಿಕ ಶೌಚಾಲಯ ನಿರ್ಮಿಸಲು ಪಟ್ಟಣದಲ್ಲಿ ಜಾಗವಿಲ್ಲ. ಜಾಗ ಹುಡುಕಿ ಕೊಡಬೇಕೆಂದು ತಹಶೀಲ್ದಾರರಿಗೆ ಮನವಿ ಮಾಡಿದ್ದೇವೆ. ಬಸ್‌ತಂಗುದಾಣದಿಂದ ದೂರದಲ್ಲಿ ಶೌಚಾಲಯ ನಿರ್ಮಿಸಿ ಪ್ರಯೋಜನವಿಲ್ಲ. ಪ್ರಸ್ತುತ ಇರುವ ತಂಗುದಾಣವನ್ನು ಕೆಡವಿ ಎರಡು ಮಹಡಿ ನಿರ್ಮಿಸಿ ಮೇಲಿನ ಮಹಡಿಯಲ್ಲಿ ಶೌಚಾಲಯ ನಿರ್ಮಿಸುವ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ.
ನಂಜುಂಡಸ್ವಾಮಿ ನಲ್ಯಹುದಿಕೇರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಸಿದ್ದಾಪುರ ಬಸ್‌ನಿಲ್ದಾಣದ ವಿಶ್ರಾಂತಿ ಕೊಠಡಿಯ ಶುಚಿತ್ವದ ಕುರಿತು ದೂರು ಬಂದಿದ್ದು ಶೀಘ್ರದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕೊಠಡಿಗೆ ಸುಣ್ಣ ಬಣ್ಣ ಬಳಿದು ಶುಚಿತ್ವ ಕಾಪಾಡುವ ಬಗ್ಗೆ ಸೂಚನೆ ನೀಡುತ್ತೇವೆ.
ಮಳನಿಸ್ವಾಮಿ ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ 
ನೆಲ್ಯಹುದಿಕೇರಿ ಪಟ್ಟಣದಲ್ಲಿ ಪ್ರತಿ ದಿನ ನೂರಾರು ಮಂದಿ ಬಸ್‌ತಂಗುದಾಣಕ್ಕೆ ಬರುತ್ತಿದ್ದಾರೆ. ವೇಗದಲ್ಲಿ ಬೆಳೆಯುತ್ತಿರುವ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಮಹಿಳೆಯರು ಮಕ್ಕಳು ಸೇರಿದಂತೆ ಸಾರ್ವಜನಿಕರು ಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಹೋರಾಟ ನಡೆಸಿದರೂ ಈವರೆಗೂ ಕ್ರಮ ಕೈಗೊಂಡಿಲ್ಲ.
ಪಿ.ಆರ್.ಭರತ್ ಕಾರ್ಯದರ್ಶಿ ಸಿ.ಪಿ.ಐ.ಎಂ ನೆಲ್ಯಹುದಿಕೇರಿ