ಮಡಿಕೇರಿ: ಮೇರಿಯಂಡ ತಂಡದವರು ಇಲ್ಲಿ ನಡೆಯುತ್ತಿರುವ ‘ಮುದ್ದಂಡ ಕಪ್’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿದರು.

ಇಲ್ಲಿನ ಫೀಲ್ಡ್ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಮೇರಿಯಂಡ ಹಾಗೂ ಕುಟ್ಟಂಡ ತಂಡಗಳು 3–3ಗೋಲುಗಳಿಂದ ಸಮಬಲ ಸಾಧಿಸಿದ್ದವು. ಟೈ ಬ್ರೇಕರ್ನಲ್ಲಿಯೂ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ 8-7ರಿಂದ ಮೇರಿಯಂಡ ಗೆಲುವು ಸಾಧಿಸಿತು.

ಚೆರುಮಾಡಂಡ 5-4 ರಿಂದ ಮಂಡೇಡ ವಿರುದ್ಧ, ಕುಮ್ಮಂಡ 4-3ರಿಂದ ತಂಬುಕುತ್ತೀರ ವಿರುದ್ಧ ಟೈ ಬ್ರೇಕರ್ನಲ್ಲಿ ಗೆಲುವು ಪಡೆದವು. ನಿತಿನ್ ಅಪ್ಪಯ್ಯ ಅವರ ಹ್ಯಾಟ್ರಿಕ್ ಗೋಲು ನೆರವಿನಿಂದ ಬೊವ್ವೇರಿಯಂಡ 5-0ಯಿಂದ ಅಜ್ಜಿನಂಡ ವಿರುದ್ಧ ಗೆಲುವು ಸಾಧಿಸಿತು.

ನೆರವಂಡ 2-0ಯಿಂದ ಬೇರೆರ ವಿರುದ್ಧ, ಮುರುವಂಡ 3-1ರಿಂದ ಮೂಕಳಮಾಡ ವಿರುದ್ಧ, ಮಂಡೇಪಂಡ 3-1ರಿಂದ ಪಾಲಂದಿರ ವಿರುದ್ಧ, ಪುದಿಯೊಕ್ಕಡ 4-0ಯಿಂದ ಚೀರಂಡ ವಿರುದ್ಧ, ಚೆಪ್ಪುಡಿರ 5-0ಯಿಂದ ಕೈಪಟ್ಟಿರ ವಿರುದ್ಧ, ಕರ್ತಮಾಡ 4-0 ಯಿಂದ ಮೇವಡ ವಿರುದ್ಧ, ಅಟ್ರಂಗಡ 2-1ಯಿಂದ ಚಿಂಡಮಾಡ ವಿರುದ್ಧ, ಮಳವಂಡ 2-0ಯಿಂದ ಅರೆಯಡ ವಿರುದ್ಧ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.