ಮಂಗಳವಾರ, ಫೆಬ್ರವರಿ 7, 2023
26 °C

ಕೊಡವ ಪ್ರೀಮಿಯರ್ ಲೀಗ್ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜನೆಗೊಂಡಿರುವ ‘ಕೊಡವ ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್’ ಪಂದ್ಯಾವಳಿಗೆ ಕರ್ನಾಟಕ ಹೈಕೋರ್ಟ್ ಮಾಜಿ ಹೆಚ್ಚುವರಿ ಅಡ್ವೊ ಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಶನಿವಾರ ಚಾಲನೆ ನೀಡಿದರು.

ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ.

‘ಕೊಡಗಿನ ಆಚಾರ, ವಿಚಾರ, ಸಂಸ್ಕೃತಿಯೊಂದಿಗೆ ಕ್ರೀಡೆ ಕೂಡ ಒಂದು ಭಾಗವಾಗಿದ್ದು, ವಿವಿಧ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳು ದೇಶ, ವಿದೇಶಗಳಲ್ಲಿ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ. ಕ್ರೀಡಾ ಸಾಧನೆ ಕೊಡಗನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಮುಂದಿನ ಯುವ ಪೀಳಿಗೆಗೆ ಇದೇ ನಮ್ಮ ಸಂಸ್ಕೃತಿ ಎಂದು ಅರಿವು ಮೂಡಿಸಲು ಕ್ರೀಡೆಯೂ ಒಂದು ಮಾರ್ಗವಾಗಿದೆ’ ಎಂದು   ಪೊನ್ನಣ್ಣ ಹೇಳಿದರು.

‘ಕೊಡಗಿನಲ್ಲಿ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಟೂರ್ನಿ ನಡೆಸು ತ್ತಿರುವುದು ಹೆಮ್ಮೆಯ ವಿಚಾರ ಎಂದ ಅವರು, ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು’ ಎಂದು ತಿಳಿಸಿದರು.

ರನ್‍ಜಿಟ್ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕಿ ನಂದಿನಿ ಎ.ತಿಮ್ಮಯ್ಯ, ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಹಾಗೂ ಟೀಮ್ ಕೈಮಡ 2025 ತಂಡದ ಪ್ರಮುಖರಾದ ಕಡೆಮಾಡ ಕನಸು ದೇವಯ್ಯ, ಕಡೆಮಾಡ ರಿತೇಶ್, ಬೆಂಗಳೂರು ಬಂಬಂಗ ತಂಡದ ಪ್ರಮುಖರಾದ ಅವರೆಮಾಡಂಡ ಶರಣ್, ಕರಿನೆರವಂಡ ವಿಲಾಸ್, ಕೊಡವ ಬೀರಂಗ ತಂಡದ ಪ್ರಮುಖರಾದ ಪಾಸೂರ ಕಿಶೋರ್, ಚೆಟ್ಟಿಯಂಡ ನಿರನ್, ಎಲ್‍ಸಿಎಂ ಟಸ್ಕರ್ಸ್ @97 ತಂಡದ ಪ್ರಮುಖರಾದ ಚೆಂದಂಡ ರೋಷನ್, ಕಲ್ಯಾಟಂಡ ಸುಜಯ್, ಕೆಎ 12 ವಾರಿಯರ್ಸ್ ತಂಡದ ಪ್ರಮುಖರಾದ ನಂದೆಟಿರ ಜೋಯಪ್ಪ, ಅಂಜಿಕೇರಿ ನಾಡ್‍ಕೂಟ ತಂಡದ ಪ್ರಮುಖರಾದ ತಿತಿರ ರೋಷನ್, ಚೆಕ್ಕೆರ ಆದಶ್, ಟೀಮ್ ಭಗವತಿ ತಂಡದ ಪ್ರಮುಖರಾದ ಬಲ್ಲರಂಡ ಸಜನ್, ಮಾಳೇಟಿರ ನವೀನ್, ಎಂಪಿಬಿ ರಾಯಲ್ಸ್ ತಂಡದ ತಂಬುಕುತ್ತಿರ ಅರುಣ್, ತಂಬುಕುತ್ತಿರ ರಾಣಿ, ಪಿ ಮತ್ತು ಜಿ ನಾಲ್ನಾಡ್ ನರಿಯ ತಂಡದ ಪ್ರಮುಖರಾದ ಬಾಳೆಯಡ ಪ್ರತೀಶ್, ಅಚ್ಚೆಯಡ ಗಗನ್, ಮೈಸೂರು ಮಕ್ಕ ತಂಡದ ಪ್ರಮುಖರಾದ ಪುದಿಯೊಕ್ಕಡ ಪ್ರವೀಣ್, ಉಳ್ಳಂಗಡ ಸಿಮ್ಮು ಕುಟ್ಟಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು