ಕೂರ್ಗ್ ಬ್ಲಾಸ್ಟರ್ಸ್ ತಂಡ ಟೀಮ್ ವೈಲ್ಡ್ ಫ್ಲವರ್ ವಿರುದ್ಧ 5 ವಿಕೆಟ್ಗಳ ಜಯ ಗಳಿಸಿತು. ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೈಲ್ಡ್ ಫ್ಲವರ್ ತಂಡ 15 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 86 ರನ್ಗಳನ್ನು ಗಳಿಸಿತು.
ಕೂರ್ಗ್ ಬ್ಲಾಸ್ಟರ್ಸ್ ತಂಡ 13 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 87 ರನ್ಗಳನ್ನು ದಾಖಲಿಸಿ ವಿಜಯ ಸಾಧಿಸಿತು.
ಕೂರ್ಗ್ ಬ್ಲಾಸ್ಟರ್ಸ್ ತಂಡದ ನಿಖಿಲ್ ಬೋಪಯ್ಯ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.