ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಶಾಲನಗರ : ಬುದ್ಧ ಪೂರ್ಣಿಮಾ ಆಚರಣೆ

Published 23 ಮೇ 2024, 16:02 IST
Last Updated 23 ಮೇ 2024, 16:02 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನಿವೃತ್ತ ನೌಕರರ ಸಂಘದಿಂದ ಗುರುವಾರ ಇಲ್ಲಿನ ಮಾರುಕಟ್ಟೆ ರಸ್ತೆ ಸಂಘದ ಕಚೇರಿಯಲ್ಲಿ ಬುದ್ಧರ 2568ನೇ ಜನ್ಮದಿನಾಚರಣೆ ಆಚರಿಸಲಾಯಿತು.

ಸಂಘದ ಅಧ್ಯಕ್ಷ ನಿವೃತ್ತ ಹಿರಿಯ ಅರಣ್ಯಾಧಿಕಾರಿ ಸಿದ್ದಪ್ಪ ‘ಬುದ್ಧ’ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ‘ಬುದ್ಧರ ಚಿಂತನೆ ವಿಚಾರ ಹಾಗೂ ಮಾರ್ಗದರ್ಶನದಿಂದ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ’ ಎಂದರು. 

ಈ ಸಂದರ್ಭ ಸಂಘದ ಉಪಾಧ್ಯಕ್ಷ ಬಿ ಸಿ ರಾಜು, ಕಾರ್ಯದರ್ಶಿ ಯು.‌ಟಿ.ರಾಮಯ್ಯ ಹಾಗೂ ಸದಸ್ಯರು ಭಾಗವಹಿಸಿದ್ದರು.


ಇದೇ ವೇಳಿ ಬುದ್ಧರ ಜೀವನ ಚರಿತ್ರೆ ಕುರಿತ ಕಿರುಚಿತ್ರ ಹಾಗೂ ವಿಡಿಯೋ ಹಾಡುಗಳನ್ನು ಪ್ರದರ್ಶಿಸಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT