ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ | ‘ತೆರಿಗೆ ಪಾವತಿಯಲ್ಲಿ ಕೊಡಗು ಪ್ರಥಮ’

ಕುಶಾಲನಗರ: ವರ್ತಕರ ಸ್ನೇಹ ಮಿಲನ
Published 12 ಮೇ 2024, 15:34 IST
Last Updated 12 ಮೇ 2024, 15:34 IST
ಅಕ್ಷರ ಗಾತ್ರ

ಕುಶಾಲನಗರ : ಕೊಡಗು ಪುಟ್ಟ ಜಿಲ್ಲೆಯಾದರೂ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ ಎನ್ನುವುದು ಹೆಮ್ಮೆ ಪಡುವ ವಿಚಾರ ಎಂದು ಚೇಂಬರ್ ಆಫ್‌ ಕಾಮರ್ಸ್ ಕೊಡಗು ಜಿಲ್ಲಾ  ಘಟಕದ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಹೇಳಿದರು.

ಚೇಂಬರ್ ಅಪ್ ಕಾಮರ್ಸ್ ಭಾನುವಾರ ಇಲ್ಲಿ ಆಯೋಜಿಸಿದ್ದ ವರ್ತಕರ ಸ್ನೇಹ ಮಿಲನ ಉದ್ಘಾಟಿಸಿ ಅವರು ಮಾತನಾಡಿದರು.

ಕುಶಾಲನಗರದಲ್ಲಿ 1991 ಚೇಂಬರ್ ಅಪ್ ಕಾಮರ್ಸ್ ಪ್ರಾರಂಭವಾಯಿತು. ಆಗಿನ ಕಾಲದಲ್ಲಿ ಸರ್ಕಾರಿ ಅಧಿಕಾರಿಗಳು ವರ್ತಕರಿಗೆ ಅನವಶ್ಯಕ ಕಿರುಕುಳ ನೀಡುದ್ದರು.  ಚೇಂಬರ್ ಪದಾಧಿಕಾರಿಗಳು ವರ್ತಕರ ತೊಂದರೆಯಾಗುವುದನ್ನು ತಪ್ಪಿಸಿದರು. ಕೊಡಗು ಕಾಫಿ ಜೊತೆಗೆ ಪ್ರವಾಸೋದ್ಯಮ ಅವಲಂಬಿತವಾಗಿದೆ. ಪೂರಕವಾದ ವಾತಾವರಣ ನಿರ್ಮಾಣ ಅಗತ್ಯವಾಗಿದೆ ಎಂದರು.

ಚೇಂಬರ್ಸ್‌ ನಿರ್ದೇಶಕ ಎಸ್.ಕೆ.ಸತೀಶ್ ಮಾತನಾಡಿ, ವರ್ತಕರ ದಿನವನ್ನು ಆಚರಿಸುವಂತಾಗಬೇಕು. ಕುಶಾಲನಗರ ಸಮಿತಿ ನಿರ್ಮಿಸಲು ಉದ್ದೇಶಿಸಿರುವ ವರ್ತಕರ ಭವನಕ್ಕೆ ಸದಸ್ಯರು ಹೆಚ್ಚಿನ ಬೆಂಬಲ ನೀಡಬೇಕೆಂದರು.

ಚೇಂಬರ್  ಅಧ್ಯಕ್ಷ ರವೀಂದ್ರ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ತಕರ ಸಹಕಾರದಿಂದ ಸಂಘಟನೆ ಮತ್ತಷ್ಟು ಬಲಪಡಿಸಿದ್ದೇವೆ. ಭವನ ನಿರ್ಮಾಣಕ್ಕೆ ಬಹುತೇಕ ಎಲ್ಲ ತಯಾರಿಗಳು ಆಗಿವೆ ಎಂದರು.

ವರ್ತಕರ ಸಮಿತಿ  ಸ್ಥಾಪಕ ಅಧ್ಯಕ್ಷ ಪಿ.ಪಿ. ಸತ್ಯನಾರಾಯಣ, ಮಾಜಿ ಅಧ್ಯಕ್ಷ ಬಿ.ಅಮೃತ್ ರಾಜ್, ಕಾರ್ಯದರ್ಶಿ ಕೆ.ಎಸ್.ನಾಗೇಶ್, ಕಾರ್ಯಕ್ರಮ ನಿರ್ದೇಶಕ ಕೆ.ಎನ್. ದೇವರಾಜ್, ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ನಿರ್ದೇಶಕರಾದ ಎನ್.ವಿ.ಬಾಬು, ಚಿತ್ರ, ರೂಪ, ಚಂದ್ರು, ಎಂ.ಕೆ.ದಿನೇಶ್  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT