ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವಾಗಲಿ: ರಾಜ ಸೋಮಯ್ಯ

Published 18 ಡಿಸೆಂಬರ್ 2023, 13:09 IST
Last Updated 18 ಡಿಸೆಂಬರ್ 2023, 13:09 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಕೊಡವ ಆಚಾರ ವಿಚಾರ ಪದ್ಧತಿ ಪರಂಪರೆ ಉಳಿಸಿ ಬೆಳೆಸುವ ಕೆಲಸಕ್ಕೆ ಸಮುದಾಯದ ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದು ಮನೆಯಪಂಡ ಕುಟುಂಬದ ಅಧ್ಯಕ್ಷ ರಾಜ ಸೋಮಯ್ಯ ಹೇಳಿದರು.

ಸಮೀಪದ ಕುಂದಾ ಮನೆಯಪಂಡ ಕುಟುಂಬದ ಐನ್ಮನೆ ಸಮೀಪದಲ್ಲಿರುವ ಮುದರೆ ಪಾಲ ಮೈದಾನದಲ್ಲಿ ಈಚೆಗೆ ನಡೆದ ಮನೆಯಪಂಡ ಕುಟುಂಬದ ಪುತ್ತರಿ ಒತ್ತೋರ್ಮೆ ಕೂಟದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ‘ಐನ್‌ಮನೆಯಲ್ಲಿ ನಡೆಯುವ ಗುರು ಕಾರೋಣ, ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೆ ಎಲ್ಲ ಕುಟುಂಬದ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು’ ಎಂದರು.

ನಿವೃತ್ತ ಎಸ್.ಪಿ ಮುಕ್ಕಾಟ್ಟಿರ ಅಪ್ಪಯ್ಯ ಹಾಗೂ ಕುಟುಂಬದ ಪಟ್ಟೆದಾರ ಮನೆಯಪಂಡ ಸಿದ್ದು ನಾಚಪ್ಪ ಮಾತನಾಡಿದರು.

ಐನ್ಮನೆ, ಗುರುಮಠ, ಗಣಪತಿ ಗುಡಿಯಲ್ಲಿ ಪ್ರತಿದಿನ ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಂಡು ಬರುತ್ತಿರುವ ಮನೆಯಪಂಡ ಬೊಳ್ಳು ಬೆಳ್ಳಿಯಪ್ಪ, ಮಧು ಬೆಳ್ಳಿಯಪ್ಪ ದಂಪತಿ, ಆದಿತ್ಯ ಅಯ್ಯಣ್ಣ, ಆದರ್ಶ್ ಕುಟ್ಟಪ್ಪ, ನಿವೃತ್ತ ಮೇಜರ್ ಮನೆಯಪಂಡ ಬೋಪಣ್ಣ ಮತ್ತು ಅವರ ಕುಟುಂಬದವರನ್ನು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕುಟುಂಬದ ಕಾರ್ಯದರ್ಶಿ ಮನೆಯಪಂಡ ನಾಚಪ್ಪ, ಆಡಳಿತ ಮಂಡಳಿಯ ಸದಸ್ಯರಾದ ಮನೆಯಪಂಡ ಧೀರಜ್, ಮನೆಯಪಂಡ ಪೂವಯ್ಯ, ಮನೆಯಪಂಡ ಬೋಪಣ್ಣ, ಮನೆಯಪಂಡ ಧನ್ಯ, ಮಂಜು, ಪ್ರಜ್ವಲ್, ಮೊಣ್ಣಪ್ಪ, ರಮೇಶ್ ಇದ್ದರು.

ಪುತ್ತರಿ ಹಬ್ಬದ ಒತ್ತೋರ್ಮೆ ಕೂಟದ ಅಂಗವಾಗಿ ವಿವಿಧ ಆಟೋಟ, ಹಾಡು, ನೃತ್ಯ ಸ್ಪರ್ಧೆಗಳು ನಡೆದವು. ಈ ಸಂದರ್ಭ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT