ಮಂಗಳವಾರ, ಮೇ 24, 2022
24 °C
ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

ಮಡಿಕೇರಿ ತಾಲ್ಲೂಕು ಜಾನಪದ ಯುವ ಬಳಗ ಅಸ್ತಿತ್ವಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ತಾಲ್ಲೂಕು ಜಾನಪದ ಪರಿಷತ್‌‌ಗೆ ಹೊಸದಾಗಿ ಯುವ ಬಳಗವನ್ನು ಸೇರ್ಪಡೆಗೊಳಿಸಲಾಗಿದೆ. ನಗರದ ಲಯನ್ಸ್ ಸಭಾಂಗಣದಲ್ಲಿ ತಾಲ್ಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಜಾನಪದ ಪರಿಷತ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಅನಿಲ್ ಮಾತನಾಡಿ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ವತಿಯಿಂದ ಜಾನಪದ ಯುವ ಬಳಗವನ್ನು ಸ್ಥಾಪಿಸಿ ಯುವ ಕಲಾವಿದರಿಗೆ ಸೂಕ್ತ ಅವಕಾಶ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಲಾ– ಕಾಲೇಜುಗಳಲ್ಲಿ ಜಾನಪದ ಯುವ ಬಳಗ ಪ್ರಾರಂಭಿಸುವ ಚಿಂತನೆಯಿದೆ ಎಂದು ಪ್ರಕಟಿಸಿದರು.

ತಾಲ್ಲೂಕು ಜಾನಪದ ಪರಿಷತ್‌ನ ಕಾರ್ಯಕ್ರಮ ಸಂಯೋಜಕಿ ಕೆ.ಜಯಲಕ್ಷ್ಮಿ, ತಾಲ್ಲೂಕು ಜಾನಪದ ಪರಿಷತ್ ಖಚಾಂಜಿ ನವೀನ್ ಅಂಬೆಕಲ್ ಮಾತನಾಡಿದರು.

ಇದೇ ಸಂದರ್ಭ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್‌ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಸಿ.ರವಿ ಅವರನ್ನು ಆಯ್ಕೆ ಮಾಡಲಾಯಿತು. ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ.ಸಿ. ರವಿ ವಂದಿಸಿದರು. ಶ್ರೀರಕ್ಷಾ ಪ್ರಭಾಕರ್, ಸ್ವೇಹ, ಸಪ್ನ ಮಧುಕರ್ ಅವರಿಂದ ಆಕರ್ಷಕ ಗೀತಗಾಯನ ಆಯೋಜಿತವಾಗಿತ್ತು. ಜಿಲ್ಲಾ ಜಾನಪದ ಪರಿಷತ್‌‌ನ ನಿರ್ದೇಶಕರಾದ ಪಿ.ಆರ್.ರಾಜೇಶ್, ವೀಣಾಕ್ಷಿ ಪಾಲ್ಗೊಂಡಿದ್ದರು.

ಆಯ್ಕೆ: ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷರಾಗಿ ಅನಿಲ್ ಎಚ್.ಟಿ., ಪ್ರಧಾನ ಕಾರ್ಯದರ್ಶಿಯಾಗಿ ಎಂ.ಸಿ. ರವಿ, ಖಚಾಂಚಿಯಾಗಿ ಅಂಬೆಕಲ್ ನವೀನ್ ಕುಶಾಲಪ್ಪ ಮರು ನೇಮಕವಾಗಿದ್ದಾರೆ.

ಜಾನಪದ ಪರಿಷತ್ ಉಪಾಧ್ಯಕ್ಷರಾಗಿ ರವಿ ಪಿ., ಪ್ರತಿಮಾ ಹರೀಶ್ ರೈ, ಜಂಟಿ ಕಾರ್ಯದರ್ಶಿಯಾಗಿ ಎಂ.ಧನಂಜಯ್, ಸಂಘಟನಾ ಕಾರ್ಯದರ್ಶಿಯಾಗಿ ಚೋಕಿರ ಅನಿತಾ ದೇವಯ್ಯ, ಪಿ.ವಿ.ಪ್ರಭಾಕರ್, ನಾಜಿಯಾ, ಯೋಜನಾ ಸಮಿತಿ ನಿರ್ದೇಶಕರಾಗಿ ಕೌಸರ್, ಅಕ್ಷತಾ ಶೆಟ್ಟಿ, ಪಿ.ಜಿ.ಸುಕುಮಾರ್, ಕಲಾವಿದರ ಆಯ್ಕೆ ಸಮಿತಿಗೆ ಪೂಣಿ೯ಮಾ ಜೋಷಿ, ಭಾರತಿ ಕಡಗದಾಳು, ಅನುಷಾ, ಶೀಲಾ ಮತ್ತು ಶಿಲ್ಪ ವೀಣಾ ಹೊಳ್ಳ ಆಯ್ಕೆಯಾಗಿದ್ದಾರೆ.

ಯುವ ಬಳಗ: ತಾಲ್ಲೂಕು ಜಾನಪದ ಯುವ ಬಳಗದ ಸಂಚಾಲಕರಾಗಿ ಗಾಯತ್ರಿ ಚೆರಿಯಮನೆ, ಶ್ರೀರಕ್ಷಾ ಪ್ರಭಾಕರ್, ಸ್ವಪ್ನ ಮಧುಕರ್ ಶೇಟ್, ಸ್ನೇಹಾ ಮಧುಕರ್ ಶೇಟ್, ಸುಪ್ರಿತಾ, ಯಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು