ಮಡಿಕೇರಿ: ‘ಶತಶತಮಾನಗಳಿಂದಲೂ ಹತ್ತಾರು ರೀತಿಯ ಮೌಢ್ಯಗಳನ್ನು ಹೊತ್ತು ನಲುಗುತ್ತಿದ್ದ ಸಮಾಜಕ್ಕೆ ವೈಚಾರಿಕತೆಯನ್ನು ಕೊಟ್ಟ ಕ್ರಾಂತಿವೀರರು ನಮ್ಮ ಶರಣರು. ಅಂತಹ ಕ್ರಾಂತಿಕಾರಿ ಶರಣರಲ್ಲಿ ಎದ್ದು ಕಾಣುವ ಹೆಸರು ಅಂಬಿಗರ ಚೌಡಯ್ಯನವರದು’ ಎಂದು ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಡಿ.ಶ್ರುತಿಶ್ರೀ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಬಂದ ಶರಣರು ಭಾಷಿಕವಾಗಿ, ಧಾರ್ಮಿಕವಾಗಿ, ತಾತ್ವಿಕವಾಗಿ, ಸಾಮಾಜಿಕವಾಗಿ ಬಹಳ ಅಪರೂಪದ ಕ್ರಾಂತಿಯನ್ನೇ ಮಾಡಿದರು. ಬಸವಣ್ಣನವರ ನೇತೃತ್ವದಲ್ಲಿ ಅವರು ಹುಟ್ಟು ಹಾಕಿದ ಮಹಾಮನೆ, ದಾಸೋಹ, ಇಷ್ಟಲಿಂಗ, ಕಾಯಕದಂತಹ ಪರಿಕಲ್ಪನೆಗಳು ಜಗತ್ತಿನ ಯಾವ ಗ್ರಂಥದಲ್ಲೂ ಸಿಗುವುದಿಲ್ಲ. ಅವರು ತಮ್ಮ ಅಂತರಂಗವನ್ನು ಶುದ್ಧಗೊಳಿಸುತ್ತ ಸಮಾಜವನ್ನು ತಿದ್ದಿದವರು’ ಎಂದು ಹೇಳಿದರು.

‘ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ, ಇಂತೀ ಹಲವು ಚಿಂತೆಯಲ್ಲಿ ಇರ್ಪುವರ ಕಂಡೆನು, ಶಿವನ ಚಿಂತೆಯಲ್ಲಿದ್ದವರೊಬ್ಬರನ್ನೂ ಕಾಣೆನೆಂದಾತ’ ಎಂದು ನಿಜಶರಣ ಅಂಬಿಗರ ಚೌಡಯ್ಯ ಅವರ ಹಲವು ವಚನಗಳನ್ನು ವಾಚಿಸಿ ಅವುಗಳ ಅರ್ಥ ವಿವರಿಸಿದರು.

‘12ನೇ ಶತಮಾನದಲ್ಲಿ ಬಸವಣ್ಣ ಅವರು ಸೇರಿದಂತೆ ಎಲ್ಲಾ ವಚನಕಾರರ ಬಗ್ಗೆ ಹಾಗೂ ಅಂಬಿಗರ ಚೌಡಯ್ಯ ಅವರು ಸಮಾಜಕ್ಕೆ ನೀಡಿರುವ ಸುಧಾರಣೆ ಮತ್ತು ಸಂದೇಶಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು’ ಎಂದು ಹೇಳಿದರು.

‘ಅಂಬಿಗ ಎನ್ನುವ ಪರಿಕಲ್ಪನೆಯೇ ಬಹಳ ವಿಶೇಷವಾದುದು. ಅದು ಹೊಳೆಯನ್ನು ದಾಟಿಸುವ ಅಣ್ಣನೊಬ್ಬನ ಉಪಕಾರ. ಹಾಗೆಯೇ ಭವದ ಹೊಳೆಯನ್ನು ದಾಟಿಸಿ ಸುರಕ್ಷಿತವಾದ ದಡವನ್ನು ಸೇರಿಸುವ ಯೋಗಿಯೊಬ್ಬನ ತಾತ್ವಿಕ ಅನುಸಂಧಾನವೂ ಹೌದು. ಅಂಬಿಗ ನಾ ನಿನ್ನ ನಂಬಿದೆ ಎನ್ನುವಲ್ಲಿ ನಂಬುವವರನ್ನು ದಡ ಸೇರಿಸುವ ಉಪಕಾರಿಯಾಗಿ ಕಾಣುವ ಈ ಕಲ್ಪನೆ ನಮ್ಮ ದೇಶದಲ್ಲಿ ಬಹಳ ವಿಶಿಷ್ಟವಾದುದು’ ಎಂದರು.

ತಹಶೀಲ್ದಾರ್ ಶ್ರೀಧರ್ ಮಾತನಾಡಿ, ‘ಜಗತ್ತಿನಲ್ಲಿ ಮೊದಲ ಬಾರಿಗೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರ’ ಎಂದು ಬಣ್ಣಿಸಿದರು.

ಸಮಾಜದಲ್ಲಿನ ಮೌಢ್ಯಗಳನ್ನು ಹೋಗಲಾಡಿಸಿ ಸಮಾನತೆಯ ಆಂದೋಲನವನ್ನೇ ಹುಟ್ಟು ಹಾಕಿದ ನಿಜ ಚಳವಳಿ ಎಂದರೆ ಅದು ವಚನ ಚಳುವಳಿ ಎಂದು ಅವರು ವರ್ಣಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಮಾತನಾಡಿ, ‘ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮೋಳಿಗೆ ಮಾರಯ್ಯ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆಯವರೆಗೂ ತಮ್ಮ ವೃತ್ತಿಗಳನ್ನು ಹೇಳಿಕೊಳ್ಳುವ ಈ ಪರಂಪರೆ ಎಷ್ಟೊಂದು ಅದ್ಭುತ’ ಎಂದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪದ್ಮಾವತಿ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.