ನಾಪೋಕ್ಲು: ಕೊಡಗು ಜಿಲ್ಲೆಯ ದೇವಾಲಯಗಳ ಪೈಕಿ ವೈಶಿಷ್ಟ್ಯಪೂರ್ಣವಾಗಿ ಗಮನೆ ಸೆಳೆಯುವ ಪಾಲೂರು ಮಹಾಲಿಂಗೇಶ್ವರ ದೇವಾಲಯವು ಕಾವೇರಿ ನದಿ ತಟದಲ್ಲಿದ್ದು, ಅತ್ಯಂತ ಪ್ರಾಚೀನವಾದ ದೇವಾಲಯವಾಗಿದೆ. ತನ್ನದೇ ಆದ ಇತಿಹಾಸವನ್ನು ಹೊಂದಿದೆ.

ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ಮಾರ್ಗದ ಮಧ್ಯೆ ಸಿಗುವ ಬೆಟ್ಟಗೇರಿ ಎಂಬಲ್ಲಿಂದ ಎಡಕ್ಕೆ ಸಾಗುವ ನಾಪೋಕ್ಲುವಿನ ರಸ್ತೆಯಲ್ಲಿ ಸಾಗಿದರೆ ಪಾಲೂರು ಸಿಗುತ್ತದೆ. ರಸ್ತೆಬದಿಯಲ್ಲಿರುವ ಕಮಾನಾಕೃತಿಯ ಪ್ರವೇಶದ್ವಾರವು ದೇವಾಲಯಕ್ಕೆ ಭೇಟಿ ನೀಡುವ ಭಕ್ತರನ್ನು ಸ್ವಾಗತಿಸುತ್ತದೆ.

ಕೇರಳದ ಶೈಲಿಯಲ್ಲಿರುವ ಈ ದೇವಾಲಯವನ್ನು ತಲುಪಬೇಕೆಂದರೆ ರಸ್ತೆಯಿಂದ ಪ್ರವೇಶ ದ್ವಾರದ ಮೂಲಕ ಸುಮಾರು 101 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ದೇವಾಲಯದ ಸುತ್ತಲೂ ವಿಶಾಲವಾದ ಪ್ರಾಕಾರವಿದ್ದು ಗರ್ಭಗುಡಿಯು ಚೌಕಾಕಾರವಾಗಿದೆ. ಅಲ್ಲದೆ, ಎದುರಿಗೆ ಮುಖಮಂಟಪವನ್ನು ಹೊಂದಿದೆ. ಈ ಮುಖ ಮಂಟಪವು ಆಕರ್ಷಕವಾಗಿದ್ದು ಇದರಲ್ಲಿ ಕೆತ್ತಲಾದ ವಿವಿಧ ರೀತಿಯ ಕೆತ್ತನೆಗಳು ಮನಸೆಳೆಯುತ್ತವೆ. ಗರ್ಭ ಗುಡಿಯಲ್ಲಿನ ದೇವರ ವಿಗ್ರಹಕ್ಕೆ ಎದುರಾಗಿರುವ ಮುಖ ಮಂಟಪದಲ್ಲಿ ಸುಂದರವಾದ ಬಸವನನ್ನು ಕೆತ್ತಲಾಗಿದೆ. ದೇವಾಲಯದ ಮುಖ ದ್ವಾರ ಪಡುವಣ ದಿಕ್ಕಿಗೆ ಇರುವುದು ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವಾಗಿದೆ.

ಮಹಾಲಿಂಗೇಶ್ವರ ದೇವಾಲಯವು ಬಹಳಷ್ಟು ಪ್ರಾಚೀನವಾದುದು ಎನ್ನಲಾಗಿದ್ದು, ಕ್ರಿ.ಶ 11ನೇ ಶತಮಾನಕ್ಕೆ ಹಿಂದೆಯೇ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ದೇವಾಲಯದಲ್ಲಿ ಕ್ರಿ.ಶ 11ನೇ ಶತಮಾನದ ಶಿಲಾಶಾಸನವಿದ್ದು, ಅದರಲ್ಲಿ ಪಾಲಯೂರು ಎಂದು ಬರೆಯಲಾಗಿದೆ.

ಈ ದೇವಾಲಯದ ಆದಿದೈವ ಪಾಲೂರಪ್ಪನಾಗಿದ್ದು, ಇವರು ಮೂಲತಃ ಕೇರಳದವರು ಎಂದು ಹೇಳಲಾಗಿದೆ. ಪಾಡಿಯ ಇಗ್ಗುತ್ತಪ್ಪನೂ ಸೇರಿದಂತೆ ತನ್ನ ಐವರು ಸೋದರರ ನಡುವಿನ ವೈಮನಸ್ಯದಿಂದಾಗಿ ಇಲ್ಲಿಗೆ ಬಂದು ನೆಲೆಯೂರಿದ ಎನ್ನುವುದು ಪ್ರಚಲಿತದಲ್ಲಿರುವ ಕಥೆಯಾಗಿದೆ.

ಕೇರಳದ ವೀರವರ್ಮ, ತಮಿಳುನಾಡಿನ ಪಾಂಡ್ಯ ಅರಸು, ಕೊಡಗಿನ ಲಿಂಗರಾಜ ಮೊದಲಾದವರ ಕಾಲದಲ್ಲಿ ಈ ದೇವಾಲಯ ಮತ್ತಷ್ಟು ಸುಧಾರಣೆ ಕಂಡಿತು. ಇಲ್ಲಿರುವ ಶಾಸನದ ಪ್ರಕಾರ ದೇವಾಲಯದ ಪೂರ್ಣ ಆಡಳಿತವನ್ನು ಶ್ರೀ ವೈಷ್ಣವ ಒಕ್ಕೂಟಕ್ಕೆ ನೀಡಿದ ಬಗ್ಗೆ ಹೇಳಲಾಗಿದೆ. ದಾನಿಗಳ ನೆರವಿನಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆದಿದೆ.

ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಇಲ್ಲಿ ವಾರ್ಷಿಕ ಉತ್ಸವ ಒಂದು ವಾರಗಳ ಕಾಲ ನಡೆಯುತ್ತದೆ. ಪಾರ್ವತಿ-ಪರಮೇಶ್ವರರ ಜೋಡಿ ದೇವರ ನೃತ್ಯ ಆಕರ್ಷಣೀಯವಾಗಿರುತ್ತದೆ. ಪಾಲೂರಪ್ಪ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಳಪಡುವ ಕುಯ್ಯಂಗೇರಿ ನಾಡಿನ ಗ್ರಾಮಗಳಾದ ಪಾಲೂರು, ಹೊದ್ದೂರು, ಹೊದವಾಡ, ಕುಂಬಳದಾಳು, ಅರವತ್ತೋಕ್ಲು, ಬೆಟ್ಟಗೇರಿ, ಹೆರವನಾಡು, ಕಾರುಗುಂದ ಮತ್ತು ಕಡಿಯತ್ತೂರಿನ ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಈ ದೇವಾಲಯದ ಆದಿದೈವ ಪಾಲೂರಪ್ಪ ಕ್ರಿ.ಶ.11ನೇ ಶತಮಾನಕ್ಕೂ ಹಿಂದೆಯೇ ನಿರ್ಮಿಸಲಾದ ದೇಗುಲ ಪ್ರತಿವರ್ಷ ಏಪ್ರಿಲ್ನಲ್ಲಿ ಉತ್ಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.