ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೂತನ ಅಧ್ಯಕ್ಷರಾಗಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧಿಕಾರ ಸ್ವೀಕಾರ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ
Published 16 ಜೂನ್ 2024, 4:48 IST
Last Updated 16 ಜೂನ್ 2024, 4:48 IST
ಅಕ್ಷರ ಗಾತ್ರ

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಶನಿವಾರ ಅಧಿಕಾರ ವಹಿಸಿಕೊಂಡರು.

ನಗರದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ರಿಜಿಸ್ಟ್ರಾರ್ ಅಜ್ಜಿಕುಟ್ಟೀರ ಗಿರೀಶ್ ಆದೇಶ ಪತ್ರ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ, ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬಾಚರಣಿಯಂಡ ಅಪ್ಪಣ್ಣ, ಕೊಡಗು ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮತ್ತು ಬಳಗದವರು ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.

ಅಧಿಕಾರ ಸ್ವೀಕಾರಕ್ಕೆ ಮೊದಲು ಮುಕ್ಕೋಡ್ಲು ವ್ಯಾಲಿ ಡ್ಯೂ ತಂಡದವರಿಂದ ಬಟ್ಟೆಪಾಟ್ ಹಾಡುವುದರ ಮೂಲಕ ಅಧ್ಯಕ್ಷರನ್ನು ಸಭಾಂಗಣಕ್ಕೆ ಕರೆತರಲಾಯಿತು.

ನೆಲ್ಲಕ್ಕಿ ನಡುಬಾಡೆಯಲ್ಲಿ ಬಾಳೋಪಾಟ್ ತಂಡದವರು ಕಾವೇರಿ ಮಾತೆಯನ್ನು ಸ್ತುತಿಸಿ ಹಾಡಿದರು. ನಂತರ, ಚಾಮೆರ ದಿನೇಶ್ ಬೆಳ್ಯಪ್ಪ ಅವರು ಒಕ್ಕಣೆ ಕಟ್ಟಿ ದೇವರ ಹೆಸರಿನಲ್ಲಿ ಅಧ್ಯಕ್ಷರ ಮುಂದಿನ ದಿನಗಳ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲೆಂದು ಅರ್ಪಣೆಯ ನುಡಿಯನ್ನಾಡಿದರು.

ಅಧ್ಯಕ್ಷರು ತಮ್ಮ ಭಾಷಣದಲ್ಲಿ ಅಕಾಡೆಮಿಯ ಸರ್ವಸದಸ್ಯರ ನೇಮಕಾತಿಯ ನಂತರ ಸಭೆ ಕರೆದು ಮುಂದಿನ ಕಾರ್ಯಯೋಜನೆಯನ್ನು ರೂಪಿಸುವುದರ ಮೂಲಕ ಕಾರ್ಯಪ್ರವೃತರಾಗುವುದಾಗಿ ಹೇಳಿದರು.

ರಿಜಿಸ್ಟ್ರಾರ್ ಎ.ಸಿ.ಗಿರೀಶ್‍ ಅವರು ಅಕಾಡೆಮಿಯ ಕಾರ್ಯೋದ್ದೇಶವನ್ನು ಸಭೆಗೆ ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಮನೆಯಪಂಡ ಕಾಂತಿಸತೀಶ್, ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್‍ಮೊಣ್ಣಪ್ಪ, ಕಿಗ್ಗಟ್ಟ್‍ನಾಡ್ ಹಿರಿಯನಾಗರಿಕ ವೇದಿಕೆಯ ಸಂಸ್ಥಾಪಕರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಡಿಕ್ಕಿ ಅಣ್ಣಯ್ಯ ಪಾರುವಂಗಡ ಸನ್ನಿ ಮೊಣ್ಣಪ್ಪ, ಕೆಂಜಂಗಡ ರೋಶನ್ ನಾಣಯ್ಯ, ಹಂಚೆಟ್ಟಿರ ಮನುಮುದ್ದಪ್ಪ, ಚೇನಂಡ ಗಿರೀಶ್ ಪೂಣಚ್ಚ, ಸೋಮೆಯಂಡ ಬೋಸ್ ಬೆಳ್ಯಪ್ಪ, ಮೂವೇರ ರೇಖಾ ಪ್ರಕಾಶ್, ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಮಾಚಿಮಂಡ ಮೀನಾ ವಸಂತ್, ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಹಿರಿಯರಾದ ಲಕ್ಷ್ಮಿನಾರಾಯಣ, ಕರ್ನಂಡ ಬೊಳ್ಳಮ್ಮ ನಾಣಯ್ಯ, ಆಚೆಯಡ ಗಗನ್, ಬಾಳೆಯಡ ಪ್ರತೀಶ್, ಕೊಡಗು ಜಾನಪದ ಪರಿಷತ್ ಸದಸ್ಯ ಅಂಬೆಕಲ್ಲು ಕುಶಾಲಪ್ಪ, ಸಂಪತ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT