ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಅವಧಿ ಎಂದರೆ ಅದು ಕೇವಲ ಮಳೆ ಸುರಿಯುವ ಕಾಲವಲ್ಲ. ಅದು ದೇಸಿ ಕ್ರೀಡೆಗಳ ಕಲರವದ ಕಾಲವೂ ಹೌದು. ಬೇಸಿಗೆಯಲ್ಲಿ ಹಾಕಿ, ಫುಟ್ಬಾಲ್, ಕ್ರಿಕೆಟ್, ಬಾಸ್ಕೆಟ್ಬಾಲ್ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಆಡಿದರೆ, ಮಳೆಗಾಲದಲ್ಲಿ ಅಪ್ಪಟ್ಟ ದೇಸಿ ಕ್ರೀಡೆಗಳಲ್ಲೇ ಅಬಾಲವೃದ್ಧರಾಗಿ ತೊಡಗಿಸಿಕೊಂಡು ಕ್ರೀಡಾಸ್ಫೂರ್ತಿ ಮೆರೆಯುತ್ತಾರೆ.

ಸಾಂಪ್ರದಾಯಿಕ ಹಬ್ಬವಾದ ಕೈಲ್ ಮುಹೂರ್ತದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಜನಪ್ರಿಯ. ಮಕ್ಕಳಿಗೆ, ಮಹಿಳೆಯರಿಗೂ ವೈವಿಧ್ಯಮಯ ಸ್ಪರ್ಧೆಗಳಿರುತ್ತವೆ. ಓಟದ ಸ್ಪರ್ಧೆ, ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ನಿಂಬೆ-ಚಮಚ ಓಟ, ಭಾರದ ಕಲ್ಲುಎಸೆತ, ಗೋಣಿ ಚೀಲ ಓಟ... ಒಂದೇ..ಎರಡೇ..ಎಲ್ಲವೂ ದೇಸೀ ಕ್ರೀಡೆಗಳು. ಇದೀಗ ಮಳೆಗಾಲದ ಕ್ರೀಡೆಗಳಲ್ಲಿ ಹಗ್ಗಜಗ್ಗಾಟ ಪ್ರಾಮುಖ್ಯತೆ ಪಡೆದಿದೆ.

ಇತ್ತೀಚೆಗೆ ಹಗ್ಗಜಗ್ಗಾಟ ಜನಪ್ರಿಯವಾಗುತ್ತಿದೆ. ವಿವಿಧ ಸಂಘ, ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸುತ್ತಿವೆ. ನಿರ್ದಿಷ್ಟ ಜನರ ತಂಡ ಬಲವಾದ ಹಗ್ಗಹಿಡಿದು ಎಳೆಯುವುದು ಆಟವಾದರೆ ತಮ್ಮ ತಂಡದವರನ್ನು ಹುರಿದುಂಬಿಸುವ ಕ್ರೀಡಾಪ್ರೇಮಿಗಳು ಆಟಗಾರರಿಗಿಂತ ಹೆಚ್ಚು ಸಂಭ್ರಮಿಸುತ್ತಾರೆ. ಶಕ್ತಿ ಪ್ರದರ್ಶನ ಈ ಕ್ರೀಡೆಯ ಪ್ರಮುಖ ಅಂಶ. ಎರಡೂ ತಂಡಗಳ ನಡುವಿನ ಬಲಾಬಲ ಪ್ರದರ್ಶನದ ಸ್ಪರ್ಧೆ. ಲೇ..ಲೇ..ಲೈಸಾ.. ಎಂಬ ಉದ್ಘೋಷಗಳ ನಡುವೆ ನಡೆಯುವ ಈ ಸ್ಪರ್ಧೆ ದೇಸೀಕ್ರೀಡೆಗಳ ಮಹತ್ವವನ್ನು ಸಾರುತ್ತವೆ.

ಕೆಲವೆಡೆ ಸರ್ಕಾರಿ ನೌಕರರು ಮತ್ತು ಕೃಷಿಕರು ಇಲ್ಲವೇ ಭತ್ತದ ಕೃಷಿ ಮಾಡುವವರು ಮತ್ತು ಭತ್ತದ ಕೃಷಿ ಮಾಡದವರು, ಹೀಗೆ ತಂಡಗಳನ್ನಾಗಿ ಮಾಡಿ ಶಕ್ತಿ ಪ್ರದರ್ಶನದ ಹಗ್ಗಜಗ್ಗಾಟ ನಡೆಸಿ ಸಂಭ್ರಮಿಸುವುದೂ ಇದೆ. ಇದರಲ್ಲಿ ಮಹಿಳೆಯರೂ ಪುರುಷರರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುವಂತೆ ಹುರುಪಿನಿಂದ ಪಾಲ್ಗೊಳ್ಳುತ್ತಾರೆ.

ಮೈದಾನ ಮಾತ್ರವಲ್ಲ. ಕೆಸರುಗದ್ದೆಗಳಲ್ಲೂ ಹಗ್ಗಜಗ್ಗಾಟ ಸ್ಪರ್ಧೆ ನಡೆಯುತ್ತದೆ. ಕೆಸರಿನಲ್ಲಿ ಬಿದ್ದು, ಎದ್ದು ಸ್ಪರ್ಧಾಳುಗಳು ಪರದಾಡಿದರೆ ವೀಕ್ಷಕರಿಗೆ ಭರಪೂರ ಮನರಂಜನೆ. ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಪ್ರತಿವರ್ಷ ಯುವಜನ ಸೇವಾ ಮತ್ತು ಕ್ರೀಡಾಇಲಾಖೆ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟಗಳು ಜರುಗುತ್ತವೆ. ಇಲ್ಲಿ ನಡೆಯುವ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಹತ್ತು ಹಲವು ತಂಡಗಳು ಪಾಲ್ಗೊಳ್ಳುತ್ತವೆ.

ವಿವಿಧ ಸಂಘ-ಸಂಸ್ಥೆಗಳು ಮಳೆಗಾಲದಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳನ್ನು ಆಯೋಜಿಸುತ್ತವೆ. ಕೊಡಗು ಜಿಲ್ಲೆಯಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟದ ಹಗ್ಗಜಗ್ಗಾಟದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಹೊರತಾಗಿ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಆಗಮಿಸುತ್ತಾರೆ. ಕೊಡಗಿನಲ್ಲಿ ನಡೆಯುವ ಕೆಸರುಗದ್ದೆ ಹಗ್ಗಜಗ್ಗಾಟ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಕ್ರೀಡಾಪಟುಗಳು ಚಳಿ, ಮಳೆ, ಕೆಸರನ್ನು ಲೆಕ್ಕಿಸದೆ ಸಂಭ್ರಮಿಸುವುದೇ ಈ ಕ್ರೀಡೆಯ ವಿಶೇಷತೆ. ಇಲ್ಲಿ ಜುಲೈನಿಂದ ಸೆಪ್ಟೆಂಬರ್ವರೆಗೆ ಕೆಸರುಗದ್ದೆ ಕ್ರೀಡಾಕೂಟಗಳು ನಡೆಯುತ್ತವೆ. ಇಲ್ಲಿ ಬಹುಮಾನಕ್ಕಿಂತ ಕೆಸರಿನಲ್ಲಿ ಆಟ ಆಡುವುದೇ ಮಜಾ ನೀಡುವಂತದ್ದು. ಅದಕ್ಕೆಂದೇ ಆಟಗಾರರು ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಸಕ್ತಿ ವಹಿಸುತ್ತಾರೆ.

ಕೆಸರಿನೋಕುಳಿಯಲ್ಲಿ ಕ್ರೀಡಾಪಟುಗಳು ಆಡುವುದನ್ನು ನೋಡುವುದೇ ಸಂಭ್ರಮ. ಮಳೆಗಾಲದಲ್ಲಿ ಬಿಡುವಿಲ್ಲದೆ ಕ್ರೀಡಾಕೂಟಗಳು ನಡೆಯುತ್ತಾ ಕ್ರೀಡಾ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಿವೆ.

ಮೊದಲೆಲ್ಲಾ ಭತ್ತದ ಗದ್ದೆಯಲ್ಲಿ ನಾಟಿ ಆದ ಬಳಿಕ ಪ್ರತಿ ಗ್ರಾಮದಲ್ಲಿ ನಾಟಿ ಓಟ ನಡೆಯುತ್ತಿತ್ತು. ನಾಟಿ ಓಟದಲ್ಲಿ ವಿಜೇತರಾದವರಿಗೆ ಸಾಂಪ್ರದಾಯಿಕವಾಗಿ ಬಾಳೆಗೊನೆ, ತೆಂಗಿನಕಾಯಿ ಹಾಗೂ ವೀಳ್ಯದೆಲೆಯನ್ನು ನೀಡಿ ಗೌರವಿಸಲಾಗುತ್ತಿತ್ತು. ಈ ದಿನಗಳಲ್ಲಿ ನಾಟಿ ಓಟ ವಿಶೇಷ ಸ್ವರೂಪವನ್ನು ಪಡೆದುಕೊಂಡಿದೆ.

17ರಂದು ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆ

ನಾಪೋಕ್ಲು: ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಹಿಂದೂಗಳಿಗಾಗಿ ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆ. 17ರಂದು ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ಇದೆ. ಪುರುಷರಿಗಾಗಿ ಆಯೋಜಿಸಲಾಗಿರುವ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಮೊದಲ ಬಹುಮಾನ ₹ 33333 ನಗದು ದ್ವಿತೀಯ ಬಹುಮಾನ ₹ 22222 ನಗದು ತೃತೀಯ ಬಹುಮಾನ ₹ 11111 ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಗುತ್ತದೆ. ಮಹಿಳೆಯರಿಗಾಗಿ ಆಯೋಜಿಸಲಾಗಿರುವ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ₹ 11111 ನಗದು ಎರಡನೇ ಸ್ಥಾನ ಪಡೆದ ತಂಡಕ್ಕೆ ₹ 5555 ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ವಿತರಿಸಲಾಗುತ್ತದೆ. ಇದು ಕೊಡಗು ಜಿಲ್ಲೆಯ ಆಟಗಾರರಿಗೆ ಮಾತ್ರ ಸೀಮಿತವಾಗಿದೆ.

ರಾಜ್ಯಮಟ್ಟದ ಕೆಸರುಗದ್ದೆ ಆಟೋಟ ಸ್ಪರ್ಧೆ

ನಾಪೋಕ್ಲು: ಆ. 23ರಂದು ಭಾಗಮಂಡಲ ಗ್ರಾಮದ ಬಳ್ಳಡ್ಕ ಅಪ್ಪಾಜಿ ಮತ್ತು ಅನು ಅವರ ಗದ್ದೆಯಲ್ಲಿ 2025-26ರ ಸಾಲಿನ ರಾಜ್ಯಮಟ್ಟದ ಮುಕ್ತ ಕೆಸರುಗದ್ದೆ ಮತ್ತು ಆಟೋಟ ಸ್ಪರ್ಧೆಗಳು ನಡೆಯಲಿವೆ. ಕೊಡಗು ಜಿಲ್ಲಾ ಪಂಚಾಯಿತಿ ಜಿಲ್ಲಾಡಳಿತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಒಕ್ಕೂಟ ವಿರಾಜಪೇಟೆ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಶ್ರೀ ಕೃಷ್ಣ ಯುವಕ ಸಂಘ ಅಯ್ಯಂಗೇರಿ ವತಿಯಿಂದ ಆಯೋಜಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿರುವ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ 7 ಮಂದಿ ಆಟಗಾರರು ಪಾಲ್ಗೊಳ್ಳಲು ಅವಕಾಶವಿದೆ. ಮಾಹಿತಿಗೆ ಮಡಿಕೇರಿ ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಸಿ.ಸುಕುಮಾರ್ ಅವರ ಮೊ: 94812 13920 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.