ಮಡಿಕೇರಿ: ಮೂಡುಬಿದಿರೆಯಲ್ಲಿ ಡಿ. 21ರಿಂದ ಆರಂಭವಾಗಲಿರುವ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಭಾಗವಹಿಸಲು ಕೊಡಗು ಜಿಲ್ಲೆಯ 564 ವಿದ್ಯಾರ್ಥಿಗಳು 10 ಬಸ್‌ಗಳಲ್ಲಿ ಮಂಗಳವಾರ ಹೊರಟರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಬೀಳ್ಕೊಟ್ಟರು. ಸಂಭ್ರಮದಿಂದ ಮಕ್ಕಳೂ ತಮ್ಮ ಪೋಷಕರತ್ತ ಕೈಬೀಸಿದರು.

ಈ ವೇಳೆ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯೂ, ‘ಕೊಡಗು ಜಿಲ್ಲೆಯ 23 ಶಾಲೆಗಳಿಂದ 564 ಮಕ್ಕಳು ಜಾಂಬೂರಿಗೆ ತೆರಳುವರು. ಇವರಲ್ಲಿ 50 ಬುಡಕಟ್ಟು ಸಮುದಾಯದ ಮಕ್ಕಳೂ ಇದ್ದಾರೆ. ಇವರನ್ನು ಉಚಿತವಾಗಿ ಕರೆದುಕೊಂಡು ಹೋಗಲಾಗುತ್ತಿದೆ. ಈಗಾಗಲೇ ಜಿಲ್ಲೆಯಿಂದ 1,260 ಕೆ.ಜಿ ಕಾಫಿ ಪುಡಿ ಹಾಗೂ 30 ಕೆ.ಜಿ ಜೇನುತುಪ್ಪವನ್ನು ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.