ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರೇಬಿಕಾ ಕಾಫಿ ಬೆಳೆಸಲು ಹೆಚ್ಚು ಉತ್ತೇಜನ

ಸೋಮವಾರಪೇಟೆಯ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಸಂಪರ್ಕ ಅಧಿಕಾರಿ ರಂಜಿತ್ ಕುಮಾರ್ ಹೇಳಿಕೆ
Published 23 ಆಗಸ್ಟ್ 2024, 7:07 IST
Last Updated 23 ಆಗಸ್ಟ್ 2024, 7:07 IST
ಅಕ್ಷರ ಗಾತ್ರ

ಶನಿವಾರಸಂತೆ: ಕಾರ್ಮಿಕರ ಕೊರತೆಯಿಂದ ಕಾಫಿ ಬೆಳೆಗಾರರು ಅರೇಬಿಕಾ ಕಾಫಿ ಬೆಳೆಯನ್ನು ಬೆಳೆಯಲು ಹಿಂಜರಿಯುತ್ತಿದ್ದಾರೆ. ಅದಕ್ಕಾಗಿ ಕಾಫಿ ಮಂಡಳಿ ವತಿಯಿಂದ ಅರೇಬಿಕಾ ಕಾಫಿ ಬೆಳೆಯಲು ಉತ್ತೇಜನವನ್ನು ನೀಡಲಾಗುತ್ತಿದೆ ಎಂದು ಸೋಮವಾರಪೇಟೆಯ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಸಂಪರ್ಕ ಅಧಿಕಾರಿ ರಂಜಿತ್ ಕುಮಾರ್ ತಿಳಿಸಿದರು.

ನಂದಿಗುಂದ ಗ್ರಾಮದ ನಂಜುಂಡೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಸೋಮವಾರಪೇಟೆ ಕಾಫಿ ಮಂಡಳಿ ಮತ್ತು ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ಬೆಳೆಗಾರರ ಸಂಘ ಏರ್ಪಡಿಸಿದ್ದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಬೆಳಗಾರರು ಹೆಚ್ಚು ರೋಬೋಸ್ಟಾ ಕಾಫಿ ಬೆಳೆ ಮೇಲೆ ಅವಲಂಬಿತರಾಗುತ್ತಿದ್ದಾರೆ. ಅರೇಬಿಕಾ ಕಾಫಿ ತಳಿ ನಶಿಸದಂತೆ ಕಾಫಿ ಮಂಡಳಿ ಹೆಚ್ಚು ಉತ್ತೇಜನ ನೀಡುವ ಸಲುವಾಗಿ ಸಹಾಯಧನದ ಮೂಲಕ ಕಾಫಿ ಬೆಳಗಾರರನ್ನು ಉತ್ತೇಜಿಸುತ್ತಿದೆ. ಕಾಫಿ ತೋಟದಲ್ಲಿ ಕೆರೆ ಮತ್ತು ನೀರಾವರಿ ವ್ಯವಸ್ಥೆ ಮಾಡಲು ಮತ್ತು ಇತರೆ ಕೆಲಸಕ್ಕೆ ಗರಿಷ್ಠ ₹ 2.5 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಪಂಗಡದವರಿಗೆ ಶೇ 90ರಷ್ಟು ಮತ್ತು ಸಾಮಾನ್ಯ ವರ್ಗದವರಿಗೆ ಶೇ 40ರಷ್ಟು ಸಹಾಯಧನವನ್ನು ಕಾಫಿ ಮಂಡಳಿಯಿಂದ ನೀಡಲಾಗುತ್ತಿದೆ ಎಂದು ಹೇಳಿದರು.

ಬೆಳೆಗಾರರು ಕಾಫಿ ಕಣ, ಪಲ್ಪರ್ ಯೂನಿಟ್, ಮೆಕಾನಿಕ್ ಡ್ರೈಯರ್ ಸೋಲಾರ್ ಟನಲ್ ಡ್ರೈಯರ್. ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳನ್ನು ಸಹಾಯಧನದ ಮೂಲಕ ವಿತರಿಸಲಾಗುತ್ತಿದೆ. ಕಾಫಿ ಮರು ನಾಟಿ ಮಾಡುವಂತಹ ರೈತರು ಆಸಕ್ತಿ ವಹಿಸಿ ಅರ್ಜಿಗಳನ್ನು ಸಲ್ಲಿಸಿದಲ್ಲಿ ಅವರಿಗೆ ಈ ವರ್ಷವೇ ಸಹಾಯಧನ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸೋಮವಾರಪೇಟೆ ರೈತ ಸಂಘದ ಉಪಾಧ್ಯಕ್ಷ ಹೂವಯ್ಯ, ಮುಖಂಡರಾದ ಬಸವನಕೊಪ್ಪ ಮೊಗಪ್ಪ, ನಂದಿಗುಂದ ಗ್ರಾಮದ ರುದ್ರಪ್ಪ ಹೆಗ್ಗುಳ ಪುಟ್ಟಸ್ವಾಮಿ, ಜಿ.ಎಂ.ಚಂದ್ರಶೇಖರ್, ಪರಮೇಶ್, ನಿಂಗಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT