ಸಿದ್ದಾಪುರ: ಮೇರಿ ಮಾತೆಯ ಜನ್ಮದಿನವನ್ನು ಸಿದ್ದಾಪುರದ ಸಂತ ಜೋಸೆಫೆರ ಚರ್ಚ್ ನಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಸಂತ ಜೋಸೆಫರ ಚರ್ಚ್ನಿಂದ ಸಿದ್ದಾಪುರ ಪಟ್ಟಣಕ್ಕೆ ಮೆರವಣಿಗೆಯ ಮೂಲಕ ತೆರಳಿದ ಕ್ರೈಸ್ತರು, ಹಳೇ ಸಿದ್ದಾಪುರದ ಮೇರಿ ಮಾತೆಯ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಜನ್ಮ ದಿನೋತ್ಸವದ ಅಂಗವಾಗಿ ಚರ್ಚ್ ಆವರಣ ಹಾಗೂ ಹಳೇ ಸಿದ್ದಾಪುರದಲ್ಲಿರುವ ಮೇರಿ ಮಾತೆಯ ಗುಡಿಯನ್ನು ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು.

ಸಂತ ಜೋಸೆಫರ ಚರ್ಚ್ನಲ್ಲಿ ಧರ್ಮಗುರುಗಳಾದ ಮೈಕಲ್ ಮರಿ ಹಾಗೂ ಏಡ್ವರ್ಡ್ ಅವರು ಮೇರಿ ಮಾತೆಯ ಬಗ್ಗೆ ಉಪನ್ಯಾಸ ನೀಡಿದರು. ಇದೇ ವೇಳೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.