ಮೈಸೂರು: ಹತ್ತನೇ ತರಗತಿ ಪಠ್ಯಪುಸ್ತಕದಲ್ಲಿ ಅಳವಡಿಸಲಾದ ವಿಷಯದ ಆಳ ಮತ್ತು ಅರ್ಥ ತಿಳಿಯದೇ ಮಾತನಾಡುವವರು ರಾಷ್ಟ್ರ ವಿರೋಧಿಗಳು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕೊಡಬೇಕಿದೆ. ದೇಶಭಕ್ತಿಯನ್ನು ಉದ್ದೀಪನಗೊಳಿಸುವಂತಹ ಪಾಠಗಳನ್ನು ಅಳವಡಿಸಲಾಗಿದೆ. ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ ಅವರನ್ನೇ ಕುರಿತ ಪಾಠ ಸೇರಿಸಿಲ್ಲ.

ಆದರ್ಶ ವ್ಯಕ್ತಿಗಳು ಯಾರು ಎಂದು ಅವರು ಬರೆದ ಭಾಷಣ ಸೇರಿಸಲಾಗಿದೆ. ಯಾರು ಬರೆದಿದ್ದಾರೆ ಎಂಬುದು ಮುಖ್ಯವಲ್ಲ. ಅದರಲ್ಲಿರುವ ವಿಷಯ ಎಷ್ಟು ಮಹತ್ವದ್ದು ಎಂಬುದು ಮುಖ್ಯ ಎಂದು ಪ್ರತಿಪಾದಿಸಿದರು.

ಹಿಂದೆಯೂ ಶಾಲೆಗಳಲ್ಲಿ ಸರಸ್ವತಿ ಪೂಜೆ, ಭಜನೆಗಳು ಇದ್ದವು. ಆಗ ಕೇಸರೀಕರಣ ಕಾಣಲಿಲ್ಲ. ಈಗ ಕೇಸರೀಕರಣದ ಹುಳುಕನ್ನು ಹುಡುಕಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.