ಶನಿವಾರ, ಸೆಪ್ಟೆಂಬರ್ 18, 2021
30 °C

25ರಿಂದ ಜಿಲ್ಲಾಮಟ್ಟದ ಫುಟ್‌ಬಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದ ಮ್ಯಾನ್ಸ್ ಕಾಂಪೌಂಡ್ ಕ್ಲಬ್‌ನ ಸುವರ್ಣ ಮಹೋತ್ಸವ ಅಂಗವಾಗಿ ಮೇ 25 ಮತ್ತು 26ರಂದು ಜಿಲ್ಲಾ ಕ್ರಿಡಾಂಗಣದಲ್ಲಿ ಜಿಲ್ಲಾಮಟ್ಟದ ಫುಟ್‌ಬಾಲ್‌ ಟೂರ್ನಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಕ್ರಿಸ್ಟೋಫರ್ ತಿಳಿಸಿದರು.

1968ರಲ್ಲಿ ಆರಂಭವಾದ ಕ್ಲಬ್, 2018ಕ್ಕೆ 50 ವರ್ಷ ಪೂರೈಸಿದೆ. ಈ ನೆನಪಿಗಾಗಿ ಎರಡು ದಿನಗಳ ಜಿಲ್ಲಾಮಟ್ಟದ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟೂರ್ನಿಯಲ್ಲಿ  26 ತಂಡಗಳಿಗೆ ಅವಕಾಶ ನೀಡಲು ಉದ್ದೇಶಿದ್ದು, ಮೊದಲು ನೋಂದಾಯಿಸಿಕೊಂಡ ತಂಡಗಳಿಗೆ ಟೂರ್ನಿ ನಡೆಯಲಿದೆ. ಪ್ರತಿ ತಂಡಕ್ಕೆ ₹ 2 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತ ತಂಡಗಳು ಮೇ 22ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಸ್ಥಾನ ₹ 22 ಸಾವಿರ ನಗದು, ದ್ವಿತೀಯ ಸ್ಥಾನಕ್ಕೆ ₹13 ಸಾವಿರ ನಗದು ಹಾಗೂ ಟ್ರೋಫಿ ವಿತರಣೆ ಮಾಡಲಾಗುವುದು. ಜತೆಗೆ ಅತ್ಯುತ್ತಮ ಗೋಲ್ ಕೀಪರ್, ಅತ್ಯುತ್ತಮ ಆಟಗಾರ ಸೇರಿದಂತೆ ವೈಯಕ್ತಿಕ ಬಹುಮಾನಗಳನ್ನೂ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಮಾಹಿತಿಗೆ ಮೊ: 70199 09495, 94489 76406 ಸಂಪರ್ಕಿಸಬಹುದು.  

ಸುದ್ದಿಗೋಷ್ಠಿಯಲ್ಲಿ ಎಂಸಿಸಿ ಕಾರ್ಯದರ್ಶಿ ಪಿ. ಉಮೇಶ್ ಕುಮಾರ್, ಖಜಾಂಚಿ ಪೀಟರ್, ಹಿರಿಯ ಆಟಗಾರ ಎನ್.ಕೆ. ರವೀಂದ್ರ, ಸದಸ್ಯ ಬಿ.ಜೆ. ಮನೋಜ್ ಕುಮಾರ್ ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.