ಭಾನುವಾರ, ಸೆಪ್ಟೆಂಬರ್ 15, 2019
26 °C
ಸುಜಯ್‌ಗೆ ಅಭಿನಂದನೆಗಳ ಮಹಾಪೂರ

ಹಣ, ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ

Published:
Updated:
Prajavani

ಮಡಿಕೇರಿ: ರಸ್ತೆಯಲ್ಲಿ ಸಿಕ್ಕಿದ ಚಿನ್ನಾಭರಣ ಹಾಗೂ ನಗದನ್ನು ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಮರಗೋಡು ಗ್ರಾಮದ ಯುವಕ ಬಡುವಂಡ್ರ ಸುಜಯ್ ಪ್ರಾಮಾಣಿಕತೆ ಮೆರೆದಿದ್ದಾರೆ.

ಹೊಸ್ಕೇರಿ ಸಮೀಪ ತೆರಳುತ್ತಿರುವಾಗ ರಸ್ತೆಯಲ್ಲಿ ಬ್ಯಾಗ್ ಸಿಕ್ಕಿದೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ರಸ್ತೆಯಲ್ಲಿ ₹ 1.5 ಲಕ್ಷ ಮೌಲ್ಯದ ಚಿನ್ನಾಭರಣ, ₹ 17 ಸಾವಿರ ನಗದು ಇತ್ತು. ಬ್ಯಾಗ್‌ನಲ್ಲಿ ದೊರೆತ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ನಾಪೋಕ್ಲು ಗ್ರಾಮದ ಮಣಿಕಂಠ ಅವರು ಭಾರೀ ಮಳೆಗೆ ಹೆದರಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ಮತ್ತು ದಾಖಲಾತಿ ತೆಗೆದುಕೊಂಡು ಸಂಬಂಧಿಕರ ಮನೆಗೆ ಹೊರಟಿದ್ದಾರೆ. ಆದರೆ, ಮಾರ್ಗಮಧ್ಯೆ ಅವರ ಈ ಬ್ಯಾಗ್ ಬಿದ್ದುಹೋಗಿತ್ತು. ಆ ಬ್ಯಾಗ್‌ ಸುಜಯ್‌ಗೆ ಸಿಕ್ಕಿತ್ತು. ಅದನ್ನು ಅವರು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ.

ಮರಗೋಡು ವೈಷ್ಣವಿ ಫುಟ್‌ಬಾಲ್‌ ತಂಡದ ನಾಯಕ ಸುಜಯ್. ಪ್ರಾಮಾಣಿಕತೆ ಮೆರೆದ ಈ ಯುವಕನಿಗೆ ಊರಿನವರು ಅಭಿನಂದಿಸಿದ್ದಾರೆ. 

Post Comments (+)