ಶುಕ್ರವಾರ, ಜನವರಿ 21, 2022
29 °C

ಗೋಣಿಕೊಪ್ಪಲು: ಮುಂದುವರಿದ ತೋಡು ತೆರವು ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ಪಟ್ಟಣದ ಕೀರೆಹೊಳೆ ಮತ್ತು ಬೈಪಾಸ್ ರಸ್ತೆ ತೆರವು ಕಾರ್ಯ ಭಾನುವಾರವೂ ನಡೆಯಿತು. ಸರ್ವೆ ಅಧಿಕಾರಿ ಶಿವಾನಂದ ರೆಡ್ಡಿ ಸ್ಥಳದಲ್ಲಿ ಹಾಜರಿದ್ದು, ಬೈಪಾಸ್ ರಸ್ತೆ ತೋಡಿನ ತೆರವು ಕಾರ್ಯಾಚರಣೆಯನ್ನು ಜೆಸಿಬಿ ಮೂಲಕ ನಡೆಸಿದರು.

ಪೂಜಾರಿ ಆರ್ಕೆಡ್ ಹಿಂಭಾಗದಲ್ಲಿ ನಡೆಯುತ್ತಿದ್ದ ಕೆಲಸವನ್ನು ಅಲ್ಲಿನ ಮನೆಯೊಂದರ ಮಾಲೀಕರು ತಡೆ ಒಡ್ಡಿದರು. ತೋಡಿಗೆ ಸೇರಿದಂತೆ ಮನೆಯ ಕಾಪೌಂಡ್ ನಿರ್ಮಿಸಲಾಗಿತ್ತು. ಇದನ್ನು ತೆರವುಗೊಳಿಸಲು ಮುಂದಾದ ಸಂದರ್ಭದಲ್ಲಿ ಮನೆ ಮಾಲೀಕರೊಬ್ಬರು ಸರ್ವೆ ಇಲಾಖೆ ಅಧಿಕಾರಿಗೊಳೊಂದಿಗೆ ಮಾತಿನ ಚಕಮಕಿ ನಡೆಸಿದರು. ದಾಖಲೆ ಪರಿಶೀಲಿಸಿದ ಬಳಿಕ ಕಾರ್ಯಾಚರಣೆ ಮುಂದುವರಿಸಿ ಎಂದು ಹೇಳಿ ಕೆಲಸಕ್ಕೆ ಅಡ್ಡಿಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸರ್ವೆ ಅಧಿಕಾರಿ ಶಿವಾನಂದ ರೆಡ್ಡಿ ನಕ್ಷೆಯಲ್ಲಿ ಇದ್ದಂತೆಯೇ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿ ಕೆಲಸವನ್ನು ಮುಂದುವರಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು