ಗೋಣಿಕೊಪ್ಪಲು: ಮನೆಯ ಮುಂದೆ ಹೂವಿನ ರಂಗೋಲಿ ಹಾಕಿ ಸಂಭ್ರಮಿಸುವ ಓಣಂ ಹಬ್ಬವನ್ನು ಪೊನ್ನಂಪೇಟೆ, ಗೋಣಿಕೊಪ್ಪಲು, ಶ್ರೀಮಂಗಲ, ಹುದಿಕೇರಿ, ಪಾಲಿಬೆಟ್ಟ ಮೊದಲಾದ ಕಡೆ ಭಾನುವಾರ ಸಡಗರದಿಂದ ಆಚರಿಸಲಾಯಿತು.
ಮಲಯಾಳಿಗರು ತಮ್ಮ ಮನೆಯ ಮುಂದಿನ ಆವರಣದಲ್ಲಿ ಬಣ್ಣ ಬಣ್ಣದ ಸೇವಂತಿಗೆ ಮತ್ತು ಚೆಂಡು ಹೂವಿನ ಎಸಳುಗಳಲ್ಲಿ ಅಂದವಾದ ರಂಗೋಲಿ ಬಿಡಿಸಿದರು. ಜತೆಗೆ ತಾವು ಕೂಡ ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು.
ಹಬ್ಬದ ಊಟ ಸವಿದ ಬಳಿಕ ಪೊನ್ನಂಪೇಟೆಯಲ್ಲಿ ವಿವಿಧ ಬಗೆಯ ಕ್ರೀಡಾ ಚಟುವಟಿಕೆ ನಡೆಸಿ ಬಹುಮಾನ ನೀಡುವ ಮೂಲಕ ವಿಜೇತರನ್ನು ಅಭಿನಂದಿಸಿದರು. ದಕ್ಷಿಣ ಕೊಡಗಿನ ಊರುಗಳಲ್ಲಿ ಓಣಂ ಆಚರಣೆ ಕಂಡುಬಂತು.