ಸೋಮವಾರಪೇಟೆ: ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡಲ್ಲಿ ಮಾತ್ರ ಅಧಿಕ ಇಳುವರಿಯೊಂದಿಗೆ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ವೀರೇಂದ್ರ ಕುಮಾರ್ ತಿಳಿಸಿದರು.

ತಾಲ್ಲೂಕಿನ ಕೂತಿ ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ, ತಾಲ್ಲೂಕು ಕೃಷಿ ಇಲಾಖೆ, ಪುಷ್ಪಗಿರಿ ರೈತ ಉತ್ಪಾದಕರ ಸಂಘ, ಜಿಲ್ಲಾ ಆಡಳಿತ, ಕಾಫಿ ಮಂಡಳಿ, ಸಂಬಾರ ಮಂಡಳಿ ವತಿಯಿಂದ ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ತಾಂತ್ರಿಕತೆಗಳ ಲಭ್ಯವಾಗುವಂತೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದಲ್ಲಿ ಮಾತ್ರ ಹೆಚ್ಚು ಲಾಭವನ್ನು ಪಡೆಯಬಹುದು. ಜಿಲ್ಲೆಯಲ್ಲಿ ಬೆಳೆಯಬಹುದಾದ ಕಾಳು ಮೆಣಸಿನ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯ ಹವಮಾನದಲ್ಲಿ ಕಾಳು ಮೆಣಸನ್ನು ಕೃಷಿ ಮತ್ತು ತಳೀಯ ಬಗ್ಗೆ ಮಾಹಿತಿ ನೀಡಿದರು.

ಕಾಳುಮೆಣನ ಬಳ್ಳಿಯ ಬುಡಕ್ಕೆ ಏಪ್ರಿಲ್, ಮೇ ತಿಂಗಳಲ್ಲಿ ವಾರಕ್ಕೆ ಒಂದು ಭಾರಿ 20 ರಿಂದ 50 ಲೀಟರ್ ನೀರು ಹಾಕುವುದರಿಂದ ಬಳ್ಳಿಯಲ್ಲಿ ಗಂಡು-ಹೆಣ್ಣಿನ ತೀರಿಗಳು ಬರಲಿದ್ದು, ಇದರಿಂದ ಸರಿಯಾಗಿ ಪರಗಸ್ಪರ್ಶ ನಡೆದು ಉತ್ತಮ ಪಸಲು ದೊರಕಲಿದೆ. ಶಾಂತಳ್ಳಿ ಹೋಬಳ್ಳಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುವುದರಿಂದ ಈ ಭಾಗಕ್ಕೆ ತೇವಂ, ಕೂರ್ಗ್ ಎಕ್ಸಲ್ ತಳಿಯನ್ನು ಬೆಳೆಯುವುದು ಸೂಕ್ತ. ಕೂರ್ಗ್ ಎಕ್ಸಲ್ ತಳಿಯು ಗೋಣಿಕೊಪ್ಪದ ಕೆವಿಕೆ ಯಲ್ಲಿ ಲಭ್ಯವಿದ್ದು ಪಡೆದುಕೊಳ್ಳಬಹುದು ಎಂದು ತಿಳಿಸಿದ ಅವರು, ಅಡಿಕೆ, ಕಾಫಿ, ಕಿತ್ತಳೆ ಬೆಳೆಯ ಬಗ್ಗೆ ಮಾಹಿತಿ ನೀಡಿದರು.

ಹುಣಸೂರಿನ ತಂಬಾಕು ಸಂಶೋಧನ ಕೇಂದ್ರದ ವಿಷಯ ತಜ್ಞ ಕೆ.ಪಿ. ರಾಘವೇಂದ್ರ ಮುಂಗಾರು ಹಂಗಾಮು ಅಭಿಯಾನ ಬಗ್ಗೆ ಹಾಗೂ ವಿವಿಧ ಮಣ್ಣಿನ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿಯ ಸಂಬಾರ ವಿಸ್ತರಣ ಸಂಸ್ಕರಣ ಘಟಕದ ದೇವರಾಜು ಕಾಳು ಮೆಣಸಿನ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಭತ್ತ ಬೇಸಾಯದ ಬಗ್ಗೆ ಮಾಹಿತಿ ಹಾಗೂ ಸರ್ಕಾರ ಕೃಷಿ ಇಲಾಖೆ ಮೂಲಕ ನೀಡಲಾಗುವ ಸವಲತ್ತು ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮಂಜುನಾಥ್ ವಹಿಸಿದ್ದರು. ಈ ಸಂದರ್ಭ ಕೂತಿ ಗ್ರಾಮದ ಅಧ್ಯಕ್ಷ ಹೆಚ್.ಎಂ. ಜಯರಾಮ್, ಸೋಮವಾರಪೇಟೆಯ ಪುಷ್ಪಗಿರಿ ರೈತ ಉತ್ಪಾದನ ಸಂಸ್ಥೆಯ ಅಧ್ಯಕ್ಷ ಸತೀಶ್, ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ನಾಪಂಡ ಪೊಣಚ್ಚ, ವಿದ್ಯಾ ಮಧುಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.