ಸರ್ಕಾರದ ‘ಗೃಹ ಜ್ಯೋತಿ’ ಯೋಜನೆಯ ಸೌಲಭ್ಯವನ್ನು ಪಡೆಯಲು ಕೊಡಗು ಜಿಲ್ಲೆಯ ಗೃಹ ಬಳಕೆಯ ವಿದ್ಯುತ್ ಗ್ರಾಹಕರು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಮಡಿಕೇರಿ ಕಾರ್ಯ ಮತ್ತು ಪಾಲನಾ ವಿಭಾಗ ಕಚೇರಿ ಮಡಿಕೇರಿ ಕುಶಾಲನಗರ ಸೋಮವಾರಪೇಟೆ ಗೋಣಿಕೊಪ್ಪಲು ವಿರಾಜಪೇಟೆ ಕಾರ್ಯ ಮತ್ತು ಪಾಲನಾ ಉಪವಿಭಾಗ ಶಾಖಾ ಕಚೇರಿ ಹಾಗೂ ತಾಳತ್‍ಮನೆ ಸಂಪಾಜೆ ಭಾಗಮಂಡಲ ಮೂರ್ನಾಡು ನಾಪೋಕ್ಲು ಕೂಡಿಗೆ ಸುಂಟಿಕೊಪ್ಪ ಚೆಟ್ಟಳ್ಳಿ ಮಾದಾಪುರ ಶಾಂತಳ್ಳಿ ಶನಿವಾರಸಂತೆ ಆಲೂರು ಸಿದ್ದಾಪುರ ಕೊಡ್ಲಿಪೇಟೆ ಶ್ರೀಮಂಗಲ ಬಾಳೆಲೆ ಸಿದ್ದಾಪುರ ಅಮ್ಮತ್ತಿ ಪಾಲಿಬೆಟ್ಟ ಕಾರ್ಯ ಮತ್ತು ಪಾಲನಾ ಶಾಖಾ ಕಚೇರಿಗಳಲ್ಲಿರುವ ‘ಗೃಹಜ್ಯೋತಿ’ ಕೌಂಟರ್‌ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ತಮ್ಮ ಮೊಬೈಲ್ ಲ್ಯಾಪ್‍ಟಾಪ್ ಕಂಪ್ಯೂಟರ್ ಸಮೀಪದ ಕರ್ನಾಟಕ-1 ಗ್ರಾಮ-1 ಗ್ರಾಮ ಪಂಚಾಯಿತಿ ಮತ್ತು ನಾಡ ಕಚೇರಿಗಳಲ್ಲಿ ಹಾಗೂ ಸೇವಾ ಸಿಂಧು ಆನ್‍ಲೈನ್ ತಂತ್ರಾಂಶದಲ್ಲೂ ಗೃಹಜ್ಯೋತಿ ಯೋಜನೆಯ ಅರ್ಜಿಯನ್ನು ನೋಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ತಿಳಿಸಿದ್ದಾರೆ.
ಸರ್ವರ್ ಸಮಸ್ಯೆಯಿಂದ ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಹೆಚ್ಚು ಜನ ಗುಂಪಾಗಿ ಅರ್ಜಿ ಸಲ್ಲಿಸುವುದರಿಂದ ಸಮಸ್ಯೆ ಎದುರಾಗಿರಬಹುದು. ಒಂದು ವಾರದ ಬಳಿಕ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದೇನೆ.