ನಿಯಮಾನುಸಾರ ಅನುಮತಿ ಪಡೆದೇ ಗಣಿಗಾರಿಕೆ
‘ಹೊಸೂರು ಗ್ರಾಮದಲ್ಲಿ 12 ಎಕರೆ ಪ್ರದೇಶದಲ್ಲಿ ಖಾಸಗಿಯವರು ಗಣಿಗಾರಿಕೆ ನಡೆಸಲು ನಿಯಮಾನುಸಾರ ಸರ್ಕಾರದಿಂದ ಅನುಮತಿ ಪಡೆದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 2023ರ ಸೆಪ್ಟೆಂಬರ್‌ನಿಂದ ಮುಂದಿನ 30 ವರ್ಷದವರೆಗೆ ಪರವಾನಗಿ ನೀಡಲಾಗಿದೆ. ಕಂದಾಯ ಇಲಾಖೆ ಅರಣ್ಯ ಇಲಾಖೆ ಪರಿಸರ ಇಲಾಖೆಗಳು ನಿರಾಪೇಕ್ಷಣಾ ಪತ್ರಗಳನ್ನೂ ನೀಡಿವೆ. ಸದ್ಯ ಸ್ಥಳದಲ್ಲಿ ಗಣಿಗಾರಿಕೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಹಾಸನ ಜಿಲ್ಲೆಯ ಭೂವಿಜ್ಞಾನಿ ಲಕ್ಷ್ಮಿಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.