ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಕಣ್ಮನ ಸೆಳೆಯುತ್ತಿದ ಮಕ್ಕಳ ಉದ್ಯಾನ

ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಪಕ್ಕದಲ್ಲೇ ಇದೆ ವಿಶಿಷ್ಟ ತಾಣ
Published 12 ಜನವರಿ 2024, 7:38 IST
Last Updated 12 ಜನವರಿ 2024, 7:38 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಹೃದಯ ಭಾಗವಾದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪಕ್ಕ ಇರುವ ಉದ್ಯಾನ ಈಗ ಕಣ್ಮನ ಸೆಳೆಯುವಂತಿದೆ.

2003ರಿಂದಲೂ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಸುಪರ್ದಿಯಲ್ಲಿರುವ ಈ ಉದ್ಯಾನ ಆರಂಭದಲ್ಲಿ ಚಿಣ್ಣರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಆದರೆ, ಕೋವಿಡ್‌ ಬಂದ ನಂತರ ಇದು ನಿರ್ವಹಣೆ ಇಲ್ಲದೇ ಸೊರಗಿತ್ತು.

ಮಕ್ಕಳಿಗಾಗಿಯೇ ಇರುವ ಆನೇಕ ಆಟದ ಪರಿಕರಗಳಿದ್ದರೂ ಗಿಡಗಂಟಿಗಳು ದಟ್ಟವಾಗಿ ಬೆಳೆದು ಉಪಯೋಗಕ್ಕೆ ಬಾರದಾಗಿತ್ತು. ಮಕ್ಕಳು ಉದ್ಯಾನದ ಒಳಗೆ ಹೋಗಲು ಹೆದರುವಂತಹ ಸ್ಥಿತಿ ಇತ್ತು.

ಈ ಕುರಿತು ‘ಪ್ರಜಾವಾಣಿ’ ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್ 13ರಂದು ‘ಮಕ್ಕಳಿಗಾಗಿ ಒಂದಿಷ್ಟು ಜಾಗ ಕೊಡಿ...!’ ಎಂಬ ಶೀರ್ಷಿಕೆಯಡಿ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ವೇಳೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದ ಸಂಸ್ಥೆಯ ಕಾರ್ಯಾಧ್ಯಕ್ಷ ರವೀಂದ್ರ ರೈ ಉದ್ಯಾನವನ್ನು ಆದಷ್ಟು ಶೀಘ್ರ ಸ್ವಚ್ಛಗೊಳಿಸಿ, ಮತ್ತೆ ಮಕ್ಕಳ ಬಳಕೆಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.

ಈಗ ಗಿಡಗಂಟಿಗಳು ತೆರವಾಗಿವೆ, ಆಟದ ಪರಿಕರಗಳಿಗೆ ಸುಣ್ಣ, ಬಣ್ಣ ಬಳಿಯಲಾಗಿದೆ. ನಡೆದಾಡುವುದಕ್ಕೆ ಸುಸಜ್ಜಿತವಾದ ‘ಪಾಥ್‌’ನ್ನು ನಿರ್ಮಿಸಲಾಗಿದೆ. ವಿಶ್ರಮಿಸಿಕೊಳ್ಳುವ ತಾಣವನ್ನು ದುರಸ್ತಿ ಮಾಡಲಾಗಿದೆ.

ಬಸ್‌ ನಿಲ್ದಾಣ ಹಾಗೂ ಪ‍್ರತಿಷ್ಠಿತವಾದ ಹೋಟೆಲ್‌ಗಳು ಇಲ್ಲಿರುವುದರಿಂದ ಪ್ರವಾಸಿಗರು ಸದಾ ಇಲ್ಲಿ ಸಂಚರಿಸುತ್ತಾರೆ. ಇವರಿಗೆ ಹಾಗೂ ನಗರದ ಮಕ್ಕಳಿಗೆ ಈ ಉದ್ಯಾನ ಉತ್ತಮ ತಾಣವಾಗಲಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷ ರವೀಂದ್ರ ರೈ, ‘ಕೋವಿಡ್ ನಂತರ ಉದ್ಯಾನದ ನಿರ್ವಹಣೆ ಇರಲಿಲ್ಲ. ಈಗ ಸಂಪೂರ್ಣವಾಗಿ ದುರಸ್ತಿಪಡಿಸಲಾಗಿದೆ. ಮುಂದೆಯೂ ನಿಯಮಿತವಾಗಿ ನಿರ್ವಹಣೆ ಮಾಡುತ್ತೇವೆ’ ಎಂದು ಹೇಳಿದರು.

ಇಂದು ಉದ್ಘಾಟನೆ

ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಚೇತನ ಚಿಲುಮೆ ವತಿಯಿಂದ ಮಕ್ಕಳ ಉದ್ಯಾನ ಉದ್ಘಾಟನಾ ಕಾರ್ಯಕ್ರಮವು ಜ. 12 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ ಸಂಸ್ಥೆಯ ಅಧ್ಯಕ್ಷ ಕೆ.ಪ್ರಕಾಶ್ ಕಾರ್ಯಾಧ್ಯಕ್ಷ ಬಿ.ಕೆ.ರವೀಂದ್ರ ರೈ ಪ್ರಧಾನ ಕಾರ್ಯದರ್ಶಿ ನಮಿತಾ ರೈ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT