ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರ ವಾರ ಸಾಧಾರಣ ಮಳೆ ಮುಂದುವರಿ ದಿದೆ. ಶೀತಗಾಳಿ ಜೋರಾಗಿ ಬೀಸುತ್ತಿದೆ.
ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಭಾಗಮಂಡಲ, ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ ತಲಾ 3 ಸೆಂ.ಮೀನಷ್ಟು ಮಳೆಯಾಗಿದೆ.
ಧರೆಗುರುಳಿದ ಮರ; ವಾಹನ ಜಖಂ
ಹೊಸಪೇಟೆ (ವಿಜಯನಗರ)– ನಗರದಲ್ಲಿ ಶುಕ್ರವಾರ ಸಂಜೆ ಸುಂಟರಗಾಳಿ ರೂಪದ ಗಾಳಿ ಕೆಲ ಕ್ಷಣ ಬೀಸಿದ್ದರಿಂದ ಪಟೇಲ್ ನಗರದಲ್ಲಿ ಬೃಹತ್ ಮರ ಉರುಳಿ ಬಿತ್ತು. ಅದರಡಿ ಸಿಲುಕಿದ ಆಟೊದಲ್ಲಿದ್ದ ಇಬ್ಬರಿಗೆ ಯಾವುದೇ ಅಪಾಯ ಆಗಲಿಲ್ಲ. ನಂತರ ಸುರಿದ ಭಾರಿ ಮಳೆಯಿಂದ ಕೆಲ ಮನೆಗಳಿಗೆ ನೀರು ನುಗ್ಗಿತು.
ಪಟೇಲ್ ನಗರದಲ್ಲಿ ಮರಬಿದ್ದು ಹಲವು ಮನೆಗಳಿಗೆ ವಿದ್ಯುತ್ ಪೂರೈಕೆ ಬಂದ್ ಆಯಿತು.