ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ: ಎರಡು ಅಂಗಡಿಯಲ್ಲಿ ಕಳವು

Published 17 ನವೆಂಬರ್ 2023, 6:46 IST
Last Updated 17 ನವೆಂಬರ್ 2023, 6:46 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಇಲ್ಲಿನ ಮಾರುಕಟ್ಟೆ ರಸ್ತೆಯಲ್ಲಿರುವ 2 ಅಂಗಡಿಗೆ ಬುಧವಾರ ರಾತ್ರಿ ನುಗ್ಗಿದ ಕಳ್ಳರು ನಗದು ಹಾಗೂ ಮೊಬೈಲ್ ಅನ್ನು ಕದ್ದು ಪರಾರಿಯಾಗಿದ್ದಾರೆ.

ಇಲ್ಲಿನ ಚಾಮುಂಡೇಶ್ವರಿ ಕಾಫಿ ವರ್ಕ್ಸ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು ₹ 5000 ಹಾಗೂ ಬ್ಯಾಂಕ್ ಖಾತೆಯ ಪುಸ್ತಕವನ್ನು ಕದ್ದಿದ್ದಾರೆ. ಅಲ್ಲದೇ ಅದೇ ರಸ್ತೆಯಲ್ಲಿರುವ ವೇದ ಡ್ರೈವಿಂಗ್ ಶಾಲೆಯ ಕಚೇರಿಗೆ ನುಗ್ಗಿ ಗಲ್ಲಾ ಪೆಟ್ಟಿಗೆಯನ್ನು ತೆರೆಯಲು ವಿಫಲರಾಗಿದ್ದು ಅಲ್ಲೇ ಇದ್ದ ಕಚೇರಿಯ ಮೊಬೈಲ್ ಅನ್ನು‌ ಕದ್ದು ಪರಾರಿಯಾಗಿದ್ದಾರೆ.

ಅಂಗಡಿಗಳ ಮಾಲೀಕರು ಗುರುವಾರ ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ ಬೀಗ ಒಡೆದಿರುವುದು ಗೊತ್ತಾಗಿದೆ.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT