ಮಂಗಳವಾರ, ಆಗಸ್ಟ್ 16, 2022
29 °C

ಹಸೆಮಣೆ ಏರಿದ ಹಾಕಿಪಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹಾಕಿಪಟು ತಿಮ್ಮಣ್ಣ ಹಾಗೂ ಸಂಸ್ಕೃತಿ ಅವರ ವಿವಾಹ ಸಮೀಪದ ಅನ್ನತ್ತಿಯ ಕೊಡವ ಸಮಾಜದಲ್ಲಿ ಭಾನುವಾರ ನಡೆಯಿತು.

ತಿಮ್ಮಣ್ಣ ಸಮೀಪದ ಮಗ್ಗುಲ ಗ್ರಾಮದ ಪುಲಿಯಂಡ ಲೋಕೇಶ್ ಹಾಗೂ ಲೀಲಾವತಿ ದಂಪತಿ ಪುತ್ರ. ಸಂಸ್ಕೃತಿ ಅವರು ಸಮೀಪದ ಕದನೂರು ಗ್ರಾಮದ ಕುಂಬೇರ ಮನುಕುಮಾರ್ ಹಾಗೂ ಪುಷ್ಪ ದಂಪತಿ ಪುತ್ರಿ.

ವಿವಾಹ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಹಾಕಿ ಆಟಗಾರರಾದ ವಿ.ಆರ್. ರಘುನಾಥ್, ಮೇಕೇರಿರ ನಿತಿನ್, ಚೇಂದಂಡ ನಿಖಿನ್, ಬಾಳೆಯಡ ಪೂಣಚ್ಚ, ಸೋಮೆಯಂಡ ಅಪ್ಪಚ್ಚು, ಕರಿನೆರವಂಡ ಸೋಮಣ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.