ಶತಮಾನೋತ್ಸವ ಭವನಕ್ಕೆ ಮುಕ್ತಿ, ₹ 3.60 ಕೋಟಿ ವೆಚ್ಚದ ಯೋಜನೆ ಸಿದ್ಧ

7

ಶತಮಾನೋತ್ಸವ ಭವನಕ್ಕೆ ಮುಕ್ತಿ, ₹ 3.60 ಕೋಟಿ ವೆಚ್ಚದ ಯೋಜನೆ ಸಿದ್ಧ

Published:
Updated:
Deccan Herald

ಸೋಮವಾರಪೇಟೆ: ಹಲವು ವರ್ಷಗಳಿಂದ ಗ್ರಹಣ ಹಿಡಿದಿದ್ದ ಶತಮಾನೋತ್ಸವ ಭವನಕ್ಕೆ ಕೊನೆಗೂ ಮುಕ್ತಿ ಕಾಣುವ ಲಕ್ಷಣ ಕಾಣುತ್ತಿದೆ.

1887ರಲ್ಲಿ ಆರಂಭವಾದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 100 ವರ್ಷ ತುಂಬಿದ ಸವಿ ನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಭವನ ಅನುದಾನದ ಕೊರತೆಯಿಂದ 11 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು.

ಈಗ ಭವನದ ಕಾಮಗಾರಿ ಮುಂದುವರೆಸಲು ಮುಂದಾಗಿದ್ದು, ₹3.60 ಕೋಟಿ ವೆಚ್ಚದ ಯೋಜನೆ ಸಿದ್ಧಗೊಂಡಿದೆ. ಶಾಲೆಯ ಪಕ್ಕದಲ್ಲಿ ಭವನಕ್ಕೆ 30 ಸೆಂಟ್‌ ಜಾಗದಲ್ಲಿ 80 ಚದರ ವಿಸ್ತೀರ್ಣದ ಸ್ಥಳದಲ್ಲಿ ಯೋಜನೆ ರೂಪುಗೊಂಡಿದೆ.

1,500ರಿಂದ 2,000 ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಕಟ್ಟಡದ ನೆಲಮಾಳಿಗೆಯಲ್ಲಿ ಅಡುಗೆ ಮನೆ, ಊಟದ ಸಭಾಂಗಣಕ್ಕೆ ಯೋಜನೆ ರೂಪಿಸಲಾಗಿದೆ.

2007ರಲ್ಲಿ ₹1.25 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸಲಾಯಿತು. ಅಂದು ಶಾಸಕರಾಗಿದ್ದ ಬಿ.ಎ. ಜೀವಿಜಯ ತಮ್ಮ ಶಾಸಕರ ನಿಧಿಯಿಂದ ₹ 18 ಲಕ್ಷ ಅನುದಾನ ನೀಡಿದ್ದರು. ನಂತರ, ಬೇರೆ ಬೇರೆ ಮೂಲದಿಂದ ಹಣ ಸಂಗ್ರಹಿಸುವುದಕ್ಕೆ ಮುಂದಾದರು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಿವಿಧ ಹಂತಗಳಲ್ಲಿ ₹15 ಲಕ್ಷ, ರಾಜ್ಯಸಭಾ ಸದಸ್ಯರಾಗಿದ್ದ ರೆಹಮಾನ್ ಖಾನ್ ಅವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹4 ಲಕ್ಷ, ಕೇಂದ್ರ ಸಚಿವರಾಗಿದ್ದ ಎಂ.ವಿ. ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹2.5 ಲಕ್ಷ ಹಾಗೂ ಮೋಟಮ್ಮ ಅವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹ 3 ಲಕ್ಷ ಒದಗಿಸಿದ್ದರು. ಈ ಹಣದಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ನಂತರ, ಜೀವಿಜಯ ಅವರು ಸೋಲು ಅನುಭವಿಸಿದರು. ಯೋಜನೆ ಅಲ್ಲಿಗೆ ಸ್ಥಗಿತಗೊಂಡಿತ್ತು. 

ಜೆಎಸ್ಎಸ್ ಕಾಲೇಜಿನ ಎಂಜಿನಿಯರ್‌ ನೂತನ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಟ್ಟಿದ್ದಾರೆ. ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಹಾಲ್‌ನಂತೆ ಒಳಾಂಗಣ ನಿರ್ಮಾಣ ಮಾಡಲು ಚಿಂತಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !