ಇವರ ಅಹವಾಲುಗಳನ್ನು ಆಲಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈಡೇರಿಸುವ ಭರವಸೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನಾ, ಅಧ್ಯಕ್ಷೆ ಎಸ್.ಯು.ಅಕ್ಕಮ್ಮ ಹಾಗೂ ಉಪಾಧ್ಯಕ್ಷರಾದ ಕೆ.ಎಸ್.ಚಿಣ್ಣಪ್ಪ ಅವರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಿತು. ಸ್ವಚ್ಛ ಭಾರತ ಮಿಷನ್ ಅಂಗವಾಗಿ ಸ್ವಚ್ಛತಾ ಪಖ್ವಾಡ ಕಾರ್ಯಕ್ರಮದ ಅಂಗವಾಗಿ ಈ ಕಾರ್ಯಚಟುವಟಿಕೆ ನಡೆಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.