ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು: ‘ತಂದ್ ಬೆಂದು’ ಯೋಜನೆಗೆ ನಿರ್ಣಯ

ಕೊಡವ ಪೊಮ್ಮಕ್ಕಡ ಕೂಟ
Published : 18 ಆಗಸ್ಟ್ 2024, 15:39 IST
Last Updated : 18 ಆಗಸ್ಟ್ 2024, 15:39 IST
ಫಾಲೋ ಮಾಡಿ
Comments

ಗೋಣಿಕೊಪ್ಪಲು: ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾದ ಪೊಮ್ಮಕ್ಕಡ ಕೂಟದಿಂದ ಕೊಡವ ಸಮುದಾಯದಲ್ಲಿ ವಧು–ವರ ಅನ್ವೇಷಣೆ ತಂದ್ -ಬೆಂದು (ಸಂಬಂಧ ಬೆಳೆಸುವುದು) ಕಾರ್ಯಕ್ರಮ ಜಾರಿಗೆ ತರಲು ಮೊದಲ ಮಹಾಸಭೆಯಲ್ಲಿ ಭಾನುವಾರ ನಿರ್ಣಯ ಕೈಗೊಳ್ಳಲಾಯಿತು.

ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡಿದ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ‘ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬಂದು ತಾವೂ ಬೆಳೆಯುವ ಮೂಲಕ ಕೂಟವನ್ನು ಬೆಳೆಸಬೇಕು. ಈ ಮೂಲಕ ಸಮಾಜದ ಶಕ್ತಿಯಾಗಿ ಇರಬೇಕು’ ಎಂದು ಹೇಳಿದರು.

‘ಕೊಡವ ಭಾಷೆ, ಕಲೆ, ಸಂಸ್ಕೃತಿಯನ್ನು ಬೆಳೆಸಿ ಪೋಷಿಸುವ ದೃಷ್ಟಿಯಿಂದ ತಂದ್ ಬೆಂದು ಕಾರ್ಯಕ್ರಮ ರೂಪಿಸಬೇಕು’ ಎಂದು ವಿಷಯ ಮಂಡಿಸಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.

ಕೂಟದ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಕೂಟದ ನಿರ್ದೇಶಕಿ ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಉಪಾಧ್ಯಕ್ಷೆ ಮೀದೇರಿರ ಕವಿತಾ ರಾಮು, ಗೌರವ ಕಾತರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಗುಮ್ಮಟ್ಟಿರ ಗಂಗಮ್ಮ, ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ, ನಿರ್ದೇಶಕಿ ಮೂಕಳೆರ ಕಾವ್ಯಮಧು, ಕೂಟದ ಖಜಾಂಚಿ ವಾಣಿ ಸಂಜು, ಜಂಟಿ ಕಾರ್ಯದರ್ಶಿ ಮುಕಳೆರ ಆಶಾ ಪೂಣಚ್ಚ,ನಿರ್ದೇಶಕಿಯರಾದ ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಕೊಟ್ಟಂಗಡ ವಿಜು ದೇವಯ್ಯ, ಬಲ್ಯಮೀ ದೇರಿರ ಆಶಾ ಶಂಕರ್ ಹಾಜರಿದ್ದರು. ಮನೆಯಪಂಡ ಪಾರ್ವತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT