ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ತೆರಾಲು ಗ್ರಾಮದಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಎರಡು ಸಾಕಾನೆಗಳ ಸಹಾಯದೊಂದಿಗೆ ಕಳೆದ ಶನಿವಾರದಿಂದ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೆ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕರು ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಗ್ರಾಮದ ಬೊಳ್ಳೇರ ಎಂ.ಚಿಣ್ಣಪ್ಪ ಕೊಟ್ಟಿಗೆಗೆ ಗುರುವಾರ ಮುಂಜಾನೆ ಆರು ಗಂಟೆ ವೇಳೆಗೆ ಹಸು ಅರಚುವ ಶಬ್ದ ಕೇಳಿ ನೋಡಿದಾಗ ಕರುವನ್ನು ಹುಲಿ ಎಳೆದೊಯ್ದಿರುವುದು ಕಂಡು ಬಂದಿದೆ.
ನಂತರ ಪರಿಶೀಲನೆ ನಡೆಸಿದಾಗ ಸಮೀಪದ ಕಾಫಿ ತೋಟದ ಹಳ್ಳದಲ್ಲಿ ಕರುವನ್ನು ಭಾಗಶಃ ತಿಂದು ಹಾಕಿದೆ.
ಸುದ್ದಿ ತಿಳಿದೊಡನೆ ಸ್ಥಳಕ್ಕೆ ರಾಜ್ಯ ವನ್ಯಜೀವಿ ಸಂಘದ ಸದಸ್ಯ ಸಂಕೇತ್ ಪೂವಯ್ಯ, ಕಾರ್ಯಾಚರಣೆ ಸ್ಥಳ್ಕೆ ಭೇಟಿ ನೀಡಿ ಸ್ಥಳ ಬದಲಾಯಿಸುವಂತೆ ಸೂಚಿಸಿದರು. ಜತೆಗೆ ಸುತ್ತಮುತ್ತ ಕ್ಯಾಮರಾ ಅಳವಡಿಸುವಂತೆ ಹೇಳಿದರು.

ಈ ಹಿನ್ನೆಲೆ ಅರಣ್ಯ ಇಲಾಖೆ ಕಾರ್ಯಾಚರಣೆ ತಂಡ ಹಲವು ಕ್ಯಾಮರಾ ಅಳವಡಿಸಿದ್ದು 14 ಆಡಿ ಅಟ್ಟಣಿಗೆ ನಿರ್ಮಿಸಿ ಹುಲಿ ಅರವಳಿಕೆ ನೀಡುವ ಗುಂಡು ಹಾರಿಸಿ ಸೆರೆ ಹಿಡಿಯಲು ಅಥವಾ ಚಲನವಲನ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.