ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಚೌಕೂರು ವನ್ಯಜೀವಿ ವ್ಯಾಪ್ತಿಯಲ್ಲಿ ಹುಲಿ ಸಾವು

Published 23 ಏಪ್ರಿಲ್ 2024, 4:05 IST
Last Updated 23 ಏಪ್ರಿಲ್ 2024, 4:05 IST
ಅಕ್ಷರ ಗಾತ್ರ

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ನಾಗರಹೊಳೆ ಹುಲಿ ರಕ್ಷಿತಾರಣ್ಯದ ಆನೆಚೌಕೂರು ವನ್ಯಜೀವಿ ವ್ಯಾಪ್ತಿಯ ಗಣಗೂರು ಅರಣ್ಯ ಪ್ರದೇಶದ ಕೆರೆಯಲ್ಲಿ ಅಂದಾಜು 7 ವರ್ಷ ವಯಸ್ಸಿನ ಗಂಡು ಹುಲಿಯ ಕಳೇಬರ ಸೋಮವಾರ ಪತ್ತೆಯಾಗಿದೆ.

‘ಇತರೆ ಪ್ರಾಣಿಗಳೊಂದಿಗೆ ಕಾದಾಡಿ ಗಾಯಗೊಂಡಿದ್ದ ಹುಲಿಯು ಕೆರೆಗೆ ನೀರು ಕುಡಿಯಲು ಬಂದು 3 ದಿನಗಳ ಹಿಂದೆಯೇ ಮೃತಪಟ್ಟಿರಬಹುದು’ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಹುಲಿ ಶರೀರ ಭಾಗಶಃ ಕೊಳೆತಿದೆ. ಹುಣಸೂರು ವನ್ಯಜೀವಿ ವಿಭಾಗದ ಪಶುವೈದ್ಯಾಧಿಕಾರಿ ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದರು.

ಸ್ಥಳಕ್ಕೆ ವಿರಾಜಪೇಟೆ ಉಪ ವಲಯದ ಡಿಸಿಎಫ್ ಜಗನ್ನಾಥ್, ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಡಿ.ಎಸ್.ದಯಾನಂದ್, ಬಾಳೆಲೆ ಪಶುವೈದ್ಯಾಧಿಕಾರಿ ಭವಿಷ್ಯಕುಮಾರ್, ಆನೆಚೌಕೂರು ವನ್ಯಜೀವಿ ವಲಯದ ಅರಣ್ಯಾಧಿಕಾರಿ ದೇವರಾಜು, ರಾಷ್ಟ್ರೀಯ ಹುಲಿ ಪ್ರಾಧಿಕಾರದ ಸದಸ್ಯ ಕುಂಙಗಂಡ ಬೋಸ್ ಮಾದಪ್ಪ, ಮುಖ್ಯ ವನ್ಯಜೀವಿ ಪರಿಪಾಲಕ ಸದಸ್ಯ ತಮ್ಮಯ್ಯ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT