ಶನಿವಾರ, ಆಗಸ್ಟ್ 8, 2020
23 °C

ಮಡಿಕೇರಿಯಲ್ಲಿ ವ್ಯಾಪಾರಕ್ಕೆ ಸಮಯ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಮಡಿಕೇರಿಯಲ್ಲಿ ಸೋಮವಾರದಿಂದ ಜಾರಿಗೆ ಬರುವಂತೆ ಸಮಯ ನಿಗದಿ ಪಡಿಸಲಾಗಿದೆ.

ಜುಲೈ 14ರಿಂದ ಜಾರಿಗೆ ಬರುವಂತೆ ಸೋಮವಾರದಿಂದ ಶುಕ್ರವಾರದ ತನಕ ಪ್ರತಿದಿನ ಬೆಳಿಗ್ಗೆ 6ರಿಂದ ಸಂಜೆ 4ರ ತನಕ ಅಂಗಡಿ ತೆರೆಯಲು ಅವಕಾಶವಿದೆ. ಜುಲೈ 18 ಮತ್ತು 25 ಶನಿವಾರ ಕೂಡ ಲಾಕ್‌ಡೌನ್‌; ಹಾಗೆಯೇ, ಜುಲೈ 12, 19 ಮತ್ತು 26ರ ಭಾನುವಾರಗಳಂದೂ ಲಾಕ್‌ಡೌನ್ ಇರಲಿದೆ.

ಜುಲೈ 25ರವರೆಗೆ ನಗರದಲ್ಲಿ ವಹಿವಾಟಿಗೆ ಸಮಯ ನಿಗದಿ ಪಡಿಸಲಾಗಿದೆ. ವ್ಯಾಪಾರಸ್ಥರು ಸಹಕಾರ ನೀಡುವಂತೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನಂಜಯ್, ಕಾರ್ಯದರ್ಶಿ ಸಂತೋಷ್ ಅನ್ವೇಕರ್, ಉಪಾಧ್ಯಕ್ಷ ಅರವಿಂದ್ ಕೆಂಚಟ್ಟಿ ಕೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು