ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಮಾತನಾಡಿ, ‘ಗಾನಶ್ರೀ ಅವರು ಕರ್ತವ್ಯದ ವೇಳೆ ಇಲ್ಲಿನ ಜನರ ಮೂಲಭೂತ ಸಮಸ್ಯೆಗಳನ್ನು ಅರಿತು ಪರಿಸರ ರಕ್ಷಣೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ರೈತರಿಗೆ ಬೇಕಾಗಿರುವಂತಹ ಉಪಯುಕ್ತವಾದ ಮಾಹಿತಿಯನ್ನು ಮತ್ತು ಆನೆ ಮತ್ತು ಮಾನವ ಸಂಘರ್ಷದ ಬಗ್ಗೆ ವಿಶೇಷ ಕಾಳಜಿ ವಹಿಸಿ ರೈತರಿಗೆ ಸೂಕ್ತ ಸಮಯದಲ್ಲಿ ಆನೆ ಸಂಚರಿಸುತ್ತಿರುವ ಮಾಹಿತಿಯನ್ನು ಒದಗಿಸಿದ್ದಾರೆ’ ಎಂದು ಶ್ಲಾಘಿಸಿದರು.