ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ: ಕರಗ ಮಹೋತ್ಸವ 7ರಿಂದ

Published 2 ಮೇ 2024, 16:19 IST
Last Updated 2 ಮೇ 2024, 16:19 IST
ಅಕ್ಷರ ಗಾತ್ರ

ವಿರಾಜಪೇಟೆ: ಪಟ್ಟಣದ ತೆಲುಗರ ಬೀದಿಯ  ದಕ್ಷಿಣ ಮಾರಿಯಮ್ಮ ದೇಗುಲದ ವಾರ್ಷಿಕ ಕರಗ ಮಹೋತ್ಸವವು ಮೇ 7 ರಿಂದ ಆರಂಭವಾಗಲಿದೆ ಎಂದು  ದಕ್ಷಿಣ ಮಾರಿಯಮ್ಮ ಮತ್ತು  ಅಂಗಾಳ ಪರಮೇಶ್ವರಿ ದೇವಾಲಯ ಟ್ರಸ್ಟ್  ಆಡಳಿತ ಮಂಡಳಿ  ತಿಳಿಸಿದೆ.

ಕರಗ ಮಹೋತ್ಸವ ಮೇ 11 ರವರೆಗೆ ನಡೆಯಲಿದೆ. 5 ದಿನ ನಡೆಯುವ ಉತ್ಸವದಲ್ಲಿ 7 ರಂದು ದೇವಿಯ ಕರಗದ ಮೆರವಣಿಗೆ, ರಾತ್ರಿ ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ. 8 ರಂದು ರಾತ್ರಿ 7ಕ್ಕೆ ತಂಬಿಟ್ಟು ಆರತಿ ಸೇವೆ ಮತ್ತು ವಿಶೇಷ ಪೂಜೆ, ಪ್ರಸಾದ ವಿನಿಯೋಗ, 9 ರಂದು ಮಧ್ಯಾಹ್ನ ದೇವಿಗೆ ವಿಶೇಷ ಅಲಂಕಾರ ಸೇವೆ, ಹರಕೆ ಸೇವೆ ನಡೆದು ಮಹಾ ಪೂಜೆ, ಮಹಾ ಮಂಗಳಾರತಿ ನಡೆಯಲಿದೆ.

ಮೇ 10 ರಂದು ರಾತ್ರಿ ದೇವಿಗೆ ಅಲಂಕಾರ ಪೂಜೆ , ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. 11 ರಂದು ಸಂಜೆ ಕರಗವು ತೆಲುಗರ ಬೀದಿ, ಜೈನರ ಬೀದಿ, ಎಫ್.ಎಂ.ಸಿ ರಸ್ತೆ, ಖಾಸಗಿ ಬಸ್‌ನಿಲ್ದಾಣದ ಜಂಕ್ಷನ್ ವರೆಗೆ ಸಂಚರಿಸಿ ದೇವಾಲಯಕ್ಕೆ ಹಿಂದಿರುಗಲಿದೆ. ಬಳಿಕ ಮಹಾ ಪೂಜೆ , ಪ್ರಸಾದ ವಿನಿಯೋಗದೊಂದಿಗೆ   ಕರಗ ಮಹೋತ್ಸವ ಕೊನೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT