ಕುಶಾಲನಗರ: ಕೂಡ್ಲೂರು ಕೈಗಾರಿಕೆ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಮತ್ತು ತಯಾರಿಕಾ ಕೇಂದ್ರದ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ನೌಕರರು ಮತ್ತು ಸ್ಥಳೀಯರ ನಡುವೆ ಗುರುವಾರ ಪರಸ್ಪರ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆಯಿತು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿ.ಪಂ.ಸದಸ್ಯ ಎಸ್.ಎನ್.ರಾಜಾರಾವ್, ಈ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.

ಕೇಂದ್ರದ ಕೆಲವು ನೌಕರರು ಮೂಲಸೌಕರ್ಯಗಳ ಕೊರತೆಯಿರುವ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಸೌಲಭ್ಯವುಳ್ಳ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಕೇತ್ರದ ಜಿ.ಪಂ.ಸದಸ್ಯೆ ಚಿತ್ರಕಲಾ ಬುಧವಾರ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಬೇಡಿಕೆ ಮುಂದಿಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರ -ವಿರೋಧ ಚರ್ಚೆ ನಡೆದ ಹಿನ್ನೆಲೆಯಲ್ಲಿ ಈ ಗೊಂದಲ ಏರ್ಪಟ್ಟಿತ್ತು.

ಮುಳ್ಳುಸೋಗೆ ಗ್ರಾ.ಪಂ.ಸದಸ್ಯ ಎಂ.ಎಸ್.ರಾಜೇಶ್ ಸೇರಿದಂತೆ ಸ್ಥಳೀಯ ಕೆಲವರು ಕೇಂದ್ರದ ನೌಕರರಿಗೆ ಸೂಕ್ತ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟ ಕಾರಣ ಕೇಂದ್ರದ ನೌಕರರಲ್ಲಿ ಎರಡು ಗುಂಪುಗಳಾಗಿ ಚರ್ಚೆ ವಿಕೋಪಕ್ಕೆ ತಿರುಗಿತು ಎನ್ನಲಾಗಿದೆ.

ಈ ಸಂದರ್ಭ ಜಿ.ಪಂ.ಸದಸ್ಯ ರಾಜಾರಾವ್ ಮತ್ತು ಗ್ರಾ.ಪಂ.ಸದಸ್ಯ ಎಂ.ಎಸ್. ರಾಜೇಶ್, ಗ್ರಾಮಸ್ಥರ ನಡುವೆ ಪರಸ್ಪರ ವಾದ -ವಿವಾದ ಮುಂದುವರೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸ್ಥಳಕ್ಕಾಗಮಿಸಿದ ಸಿಪಿಐ ಬಿ.ಬಸವರಾಜ್, ಪಿಎಸ್‌ಐ ಆರ್.ಜಿ.ಚನ್ನೇಗೌಡ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಸಂದರ್ಭ ಸ್ಥಳದಲ್ಲಿ ಗ್ರಾಪಂ.ಸದಸ್ಯ ಅರುಣ್, ಗ್ರಾ.ಪಂ.ಮಾಜಿ ಸದಸ್ಯ ಎನ್.ಕೆ.ಚಂದ್ರಶೇಖರ್, ಸ್ಥಳೀಯರಾದ ಎಂ.ಟಿ.ಮೂಡ್ಲಿಗೌಡ, ಹೇಮಂತ್‌ಕುಮಾರ್, ಅರುಣ್‌ಕುಮಾರ್, ಸಣ್ಣಪ್ಪ ಸೇರಿದಂತೆ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಈ ಕೇಂದ್ರ ನಡೆಸಲು ಬಾಡಿಗೆಗೆ ನೀಡಿರುವ ಕಟ್ಟಡವನ್ನು ತಕ್ಷಣ ತೆರವುಗೊಳಿಸುವಂತೆ ಕಟ್ಟಡ ಮಾಲೀಕರು ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರದ ಸ್ಥಳಾಂತರದ ಕುರಿತು ವಾದ -ವಿವಾದ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.