ಮಡಿಕೇರಿ: ತೆಲಂಗಾಣ ಮಾದರಿಯಲ್ಲೇ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಕೊಡವ ಲ್ಯಾಂಡ್ ಘೋಷಣೆಗೆ ಸಂಬಂಧಿಸಿದ ಮಸೂದೆ ಮಂಡಿಸುವಂತೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸೋಮವಾರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಕೇಂದ್ರದ ಹಲವು ಸಚಿವರಿಗೆ ಮನವಿ ಪತ್ರ ಸಲ್ಲಿಸಿತು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ‘ಬ್ರಿಟೀಷರ ಆಳ್ವಿಕೆಯ ನಂತರ ‘ಸಿ’ ರಾಜ್ಯವಾಗಿದ್ದ ಕೊಡಗು ಕರ್ನಾಟಕದ ಜತೆ ವಿಲೀನಗೊಂಡ ನಂತರ ಕೊಡವ ಜನಾಂಗದ ಸಾಂಸ್ಕೃತಿಕ ಹೆಗ್ಗುರುತು, ಅನನ್ಯತೆ, ಭಾಷೆ, ಭೂ ಹಿಡುವಳಿ, ಅಭಿವೃದ್ಧಿ ಕಾರ್ಯಗಳೆಲ್ಲವೂ ಶೀಲ ಮಾರಾಟಕ್ಕಿಟ್ಟ ಸರಕಾಗಿ ಹೋಗಿದೆ. ಕೊಡವರು ವಿಶಾಲ ಕರ್ನಾಟಕದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡವರ 45 ಪ್ರಾಚೀನ ನಾಡುಗಳನ್ನು ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್ ಮತ್ತು ಬೋಡೋ ಟೆರಿಟೋರಿಯಲ್ ಕೌನ್ಸಿಲ್ ಮಾದರಿಯಲ್ಲಿಯೇ ಸಂವಿಧಾನದ 6ನೇ ಪರಿಚ್ಛೇದದ ಪ್ರಕಾರ ‘ಕೊಡವ ಲ್ಯಾಂಡ್’ ಎಂದು ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ಕೊಡವರ ಜನ್ಮ ಭೂಮಿಗೆ ಸ್ವಯಂ ಶಾಸನದ ಅಧಿಕಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇದೇ ಬಜೆಟ್ ಅಧಿವೇಶನದ ಮಧ್ಯಭಾಗದಲ್ಲಿ ತೆಲಂಗಾಣಕ್ಕೆ ನ್ಯಾಯಮೂರ್ತಿ ಶ್ರೀಕೃಷ್ಣ ಸಮಿತಿಯ ವರದಿ ಶಿಫಾರಸಿನನ್ವಯ ಪ್ರಾದೇಶಿಕ ಸ್ವಾಯತ್ತತೆ ನೀಡಲು ಮಸೂದೆ ಮಂಡಿಸಲು ಮುಂದಾಗಿದ್ದು, ಅದರ ಜತೆಯಲ್ಲಿಯೇ ‘ಕೊಡವ ಲ್ಯಾಂಡ್’ ಘೋಷಣೆಗೆ ಸಂಬಂಧಿಸಿದಂತೆ ಮಸೂದೆ ಮಂಡಿಸಬೇಕು’ ಎಂದು ಒತ್ತಾಯಿಸಿದರು.

‘ಈ ದೇಶದ ಬಹುಸಂಖ್ಯಾತರ ಆಡಳಿತದಡಿಯಲ್ಲಿ ಬರುವ ಅಲ್ಪಸಂಖ್ಯಾತರು ಅಂದರೆ, ಅದು ಧಾರ್ಮಿಕ ಅಲ್ಪಸಂಖ್ಯಾತರೇ ಇರಬಹುದು, ಭಾಷಾ ಅಲ್ಪಸಂಖ್ಯಾತರೇ ಇರಬಹುದು, ಜನಾಂಗೀಯ ಅಲ್ಪಸಂಖ್ಯಾತರೇ ಇರಬಹುದು ಅಥವಾ ರಾಷ್ಟ್ರೀಯ ಅಲ್ಪಸಂಖ್ಯಾತರೇ ಇರಬಹುದು. ಇಂತಹ ಅಲ್ಪಸಂಖ್ಯಾತ ಜನಾಂಗದ ಹಿತಾಸಕ್ತಿ ಕಾಯುವುದು ಜವಾಬ್ದಾರಿ ಮತ್ತು ಹೊಣೆಗಾರಿಕೆ ಬಹುಸಂಖ್ಯಾತರದ್ದಾಗಿದೆ. ಅಂತೆಯೇ, ಕೊಡವರು ಒಂದೇ ಪ್ರದೇಶದಲ್ಲಿ ತಮ್ಮ ಆವಾಸ ಸ್ಥಾನವನ್ನು ಅನಾದಿ ಕಾಲದಿಂದಲೂ ರೂಪಿಸಿಕೊಂಡಿರುವ ಅಲ್ಪಸಂಖ್ಯಾತರಾಗಿದ್ದು, ಅವರ ಜನ್ಮಭೂಮಿಗೆ ಸ್ವಾಯತ್ತತೆ ಕಲ್ಪಿಸುವುದು ಸಂವಿಧಾನಾತ್ಮಕ ಋಣಭಾರವಾಗಿದೆ’ ಎಂದು ಪ್ರತಿಪಾದಿಸಿದರು.

‘ಕೇಂದ್ರ ಸರ್ಕಾರ ಪ್ರಸ್ತುತ ಈ ರಾಷ್ಟ್ರದ ಸಾರ್ವಭೌಮತ್ವಕ್ಕೆ ಸವಾಲೊಡ್ಡಿರುವ ಕಾಶ್ಮೀರಿ ಪ್ರತ್ಯೇಕತಾವಾದಿಗಳು, ಅಸ್ಸಾಂನ ಉಲ್ಫಾ ಪ್ರತ್ಯೇಕತಾವಾದಿಗಳು ಹಾಗೂ ನಾಗಾಲ್ಯಾಂಡ್ನ ಪ್ರತ್ಯೇಕವಾದಿಗಳೊಂದಿಗೆ ಸಂಧಾನಕ್ಕೆ ಮುಂದಾಗಿದೆ. ಆದರೆ, ಶಾಂತಿ ಮಾರ್ಗದಲ್ಲಿ ಹೋರಾಟ ನಡೆಸುತ್ತಿರುವ ಸಿಎನ್ಸಿ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ದೌರ್ಬಲ್ಯವೆಂದು ಪರಿಗಣಿಸದೆ ‘ಕೊಡವ ಲ್ಯಾಂಡ್’ ಎಂದು ಘೋಷಿಸಿದಲ್ಲಿ ಭಾರತದ ಗಣರಾಜ್ಯಕ್ಕೆ ಹೆಚ್ಚಿನ ಅರ್ಥ ಬರಲಿದೆ. ತೆಲಂಗಾಣದೊಂದಿಗೆ ‘ಕೊಡವ ಲ್ಯಾಂಡ್’ ಪರಿಗಣಿಸದಿದ್ದಲ್ಲಿ ಅದು ಜನಾಂಗೀಯ ತಾರತಮ್ಯವಾಗಲಿದೆ’ ಎಂದು ಎಚ್ಚರಿಸಿದರು. ಮಣವಟ್ಟೀರ ಜಗ್ಗು, ಚಂಬಾಂಡ ಜನತ್, ಪುಲ್ಲೇರ ಸ್ವಾತಿ, ಪುಲ್ಲೇರ ಕಾಳಪ್ಪ, ಚೀಯಕಪೂವಂಡ ಮನು ಕೊಡವ, ಮಣವಟ್ಟೀರ ಶಿವಣಿ, ಕಾಟುಮಣಿಯಂಡ ಉಮೇಶ್, ಮಂಡೀರ ಜಿಮ್ಮಿ, ಅರುಣ್ ಬೇಬ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.