ವಿರಾಜಪೇಟೆ: ಕಲೆಯ ಸಿರಿತನಕೆ ತಲೆಬಾಗದವರಿಲ್ಲ. ಆದರೆ, ಕಲಾದೇವಿ ಕೆಲವರಿಗೆ ಮಾತ್ರ ಒಲಿಯುತ್ತಾಳೆ. ಕಲಾದೇವಿಯ ಆಶಿರ್ವಾದದಿಂದ ಕಲಾ ಪ್ರಪಂಚದಲ್ಲಿ ಉನ್ನತ ಸಾಧನೆಯನ್ನು ತೋರುತ್ತಿರುವವರು ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಿ.ಆರ್. ಸತೀಶ್. ಚಿತ್ರಕಲಾ ಶಿಕ್ಷಕರಾದ ಇವರ ಸೇವೆ ಅನನ್ಯವಾದದ್ದು.

ಬಿ.ಪಿ. ರಾಜು ಹಾಗೂ ಬಿ.ಪಿ. ರಾಧಾ ದಂಪತಿಯ ಪುತ್ರನಾಗಿ ವಿರಾಜಪೇಟೆ ಯಲ್ಲಿ ಜನಿಸಿದ ಇವರು ಡ್ರಾಯಿಂಗ್ ಮಾಸ್ಟರ್ ಸರ್ಟಿಫಿಕೇಟ್ (ಡಿಸಿಎಂ), ಆರ್ಟ್ ಮಾಸ್ಟರ್ ಸರ್ಟಿಫಿಕೇಟ್ (ಎಎಂಸಿ) ಹಾಗೂ ಮಾಸ್ಟರ್ ಆಫ್ ಫೈನ್ ಆರ್ಟ್ (ಎಂಎಫ್ಎ) ಶಿಕ್ಷಣವನ್ನು ಪಡೆದಿದ್ದಾರೆ.

1991ರಲ್ಲಿ ವಿರಾಜಪೇಟೆಯ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದ ಇವರು 2008ರಿಂದ ಪ್ರಸ್ತುತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಗೋಣಿಕೊಪ್ಪಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಾತ್ಮಕ ಅಭಿವ್ಯಕ್ತಿ, ಸ್ಮರಣಾಶಕ್ತಿ, ವಿಮರ್ಶಾತ್ಮಕ ಬುದ್ದಿಯ ವಿಕಸನ, ಸ್ವಚ್ಛತೆ, ಸೌಂದರ್ಯಾನ್ವೇಷಣ ಶಕ್ತಿಗೆ ಸಹಕಾರಿಯಾಗುವಂತೆ ಚಿತ್ರಕಲೆಯಲ್ಲಿ ವಸ್ತು ಚಿತ್ರಣ, ಪಕೃತಿ ಚಿತ್ರಣ ಅಕ್ಷರ ಚಿತ್ರಣ ಹಾಗೂ ಕೆಲವೊಂದು ಸುಲಭ ರೀತಿಯ ಚಿತ್ರಕಲಾ ರಚನೆಯನ್ನು ಬೋಧಿಸುತ್ತಾ ಬಂದಿದ್ದಾರೆ. ವೈಯಕ್ತಿಕ ಮತ್ತು ಗುಂಪು ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ, ಶಿಬಿರ ನಡೆಸುವ ಇವರು ಜಲವರ್ಣ, ತೈಲವರ್ಣ, ಅಕ್ರಿಲಿಕ್ ಹಾಗೂ ಮಿಶ್ರ ಮಾಧ್ಯಮಗಳಲ್ಲಿ ಚಿತ್ರಗಳ ರಚನೆಯನ್ನು ಮಾಡುತ್ತಾ ಚಿತ್ರಕಲೆಯ ಬಗ್ಗೆ ಲೇಖನ ಬರೆಯುತ್ತಾರೆ.

ಪ್ರತಿ ವರ್ಷ ಕನಿಷ್ಟ 50 ವಿದ್ಯಾರ್ಥಿಗಳಿಗೆ ರಜೆ ದಿನಗಳಲ್ಲಿ ಸುಮಾರು 10 ದಿನಗಳ ಚಿತ್ರಕಲಾ ಶಿಬಿರವನ್ನು ಇವರು ಆಯೋಜಿಸುತ್ತಾರೆ. ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಜಲವರ್ಣ, ತೈಲವರ್ಣ ಹಾಗೂ ಮಿಶ್ರ ಮಾಧ್ಯಮದಲ್ಲಿ ಚಿತ್ರಕಲೆಯನ್ನು ರಚಿಸುವುದರ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಶಿಬಿರದ ಬೆಳಗಿನ ಅವಧಿಯಲ್ಲಿ ಚಿತ್ರ ಪ್ರಾತ್ಯಕ್ಷಿಕೆ ಹಾಗೂ ಕರಕುಶಲ ಕಲೆಯ ತರಬೇತಿ ಹಾಗೂ ಅಪರಾಹ್ನ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ವಿಚಾರಧಾರೆಯನ್ನು ಆಯೋಜಿಸಲಾಗುತ್ತದೆ. ಶಿಬಿರದಲ್ಲಿ ಕನಿಷ್ಠ ಮೂರು ದಿನಗಳು ವಿದ್ಯಾರ್ಥಿಗಳನ್ನು ಸುಂದರ ಪ್ರಕೃತಿ ತಾಣಕ್ಕೆ ಕರೆದುಕೊಂಡು ಹೋಗಿ ಪರಿಸರ ಹಾಗೂ ಅದರ ಸ್ವಚ್ಛತೆ, ಪ್ರಾಣಿ ಪಕ್ಷಿಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದರೊಂದಿಗೆ ಸ್ಥಳ ದಲ್ಲಿ ಚಿತ್ರ ರಚಿಸುವುದರ ಬಗ್ಗೆ ತಿಳಿಸಿ ಕೊಡುತ್ತಾರೆ.

2001-–02 'ಜನ ಮೆಚ್ಚಿದ ಶಿಕ್ಷಕ' ಪ್ರಶಸ್ತಿ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರಿಂದ 2003-–04 ಜಿಲ್ಲಾಮಟ್ಟದ 'ಅತ್ಯುತ್ತಮ ಶಿಕ್ಷಕ' ಪ್ರಶಸ್ತಿ, 2011–-12 ನೇ ಸಾಲಿನ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. 2010ರಲ್ಲಿ ನಡೆದ ಜನಗಣತಿಯಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ಭಾರತ ಸರ್ಕಾರದ ಗೃಹಮಂತ್ರಿ ಅವರಿಂದ ಕಂಚಿನ ಪದಕವನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೆ 2003, 2007 ಮತ್ತು 2010 ರಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಬಿ.ಆರ್. ಸತೀಶ್ ಅವರ ಅನೇಕ ಮಂದಿ ವಿದ್ಯಾರ್ಥಿಗಳು ಇಂದು ವಿವಿಧೆಡೆಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಇಬ್ಬರು ಪುತ್ರಿಯರಾದ ಯಶಸ್ವಿನಿ ಹಾಗೂ ಪಯಶ್ವಿನಿ ಅಪ್ಪನ ಹಾದಿಯಲ್ಲೆ ಸಾಗುತ್ತಿದ್ದು ತಮ್ಮ ಎಳವೆಯಲ್ಲೆ ಕಲಾಕ್ಷೇತ್ರದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.