ಕೋಲಾರ: ವಿಪ್ರ ಸಮುದಾಯದಲ್ಲಿನ ಹಿಂದುಳಿದವರಿಗೆ ನೆರವಾಗುವ ದೃಷ್ಟಿಯಿಂದ ₹ 100 ಕೋಟಿ ಕ್ಷೇಮಾಭಿವೃದ್ಧಿ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದು, ಈ ಸಂಬಂಧ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ತಿಳಿಸಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ ಹಾಗೂ ರಾಜ್ಯ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬ್ರಾಹ್ಮಣ ಸಮುದಾಯದಲ್ಲಿನ ಕನಿಷ್ಠ 10 ಸಾವಿರ ಮಂದಿ ಉಳ್ಳವರಿಂದ ತಲಾ ₹ 1 ಲಕ್ಷ ಸಂಗ್ರಹಿಸಿ ₹ 100 ಕೋಟಿ ನಿಧಿ ಮಾಡುವ ಉದ್ದೇಶವಿದೆ. ಈಗಾಗಲೇ 3 ತಿಂಗಳಲ್ಲಿ ₹ 80 ಲಕ್ಷ ಸಂಗ್ರಹವಾಗಿದ್ದು, ಈ ಕಾರ್ಯದಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಲೋಪವಾಗದಂತೆ ಎಚ್ಚರವಹಿಸಲು ಉಪಸಮಿತಿ ರಚಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿ, ಕಟ್ಟಕಡೆಯ ಹಳ್ಳಿಯ ವಿಪ್ರರೂ ಸಂಘಟನೆಯಲ್ಲಿ ಸದಸ್ಯರಾಗಬೇಕು. ಜಿಲ್ಲೆಯಲ್ಲಿ 25 ಸಾವಿರ ಸದಸ್ಯತ್ವ ನೋಂದಣಿಯ ಸಂಕಲ್ಪದೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು.

ಬ್ರಾಹ್ಮಣ ಸಮುದಾಯದ ಯವಜನತೆಗೆ ಸರ್ಕಾರಿ ಕೆಲಸದ ಆಸೆ ಕ್ಷೀಣಿಸತೊಡಗಿದೆ. ಖಾಸಗಿ ವಲಯದಲ್ಲಿ ಉದ್ಯೋಗ ಸಿಗುತ್ತಿದ್ದು, ಸಮುದಾಯದ ಉದ್ಯೋಗದಾತರು ಬಡ ವಿಪ್ರರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ‘ಮಹಾಸಭಾ ಮುಖ್ಯ ಉದ್ದೇಶ ಪ್ರತಿಯೊಂದು ವಿಪ್ರ ಕುಟುಂಬದ ಸದಸ್ಯತ್ವ ನೋಂದಣಿ ಮಾಡಿಸಬೇಕು. ಸಮುದಾಯದ ಯಾರೂ ಸಂಘಟನೆಯಿಂದ ದೂರ ಉಳಿಯಬಾರದು ಎಂಬುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಮಹಾಸಭಾ ಉಪಾಧ್ಯಕ್ಷ ಪುರುಷೋತ್ತಮ್ ಹಾಗೂ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ‘ಸಮುದಾಯದಲ್ಲಿ ಬಡವರು ಇದ್ದಾರೆ. ಅವರ ಪಟ್ಟಿ ತಯಾರಿಸಿ ಆರ್ಥಿಕ ಪರಿಸ್ಥಿತಿ ಕುರಿತು ಸರ್ವೇ ನಡೆಸಿ, ಅವರ ನೆರವಿಗೆ ಮುಂದಾಗಬೇಕು. ಶಿಕ್ಷಣ, ಆರೋಗ್ಯಕ್ಕೆ ನೆರವು ಬಯಸಿ ಮಹಾಸಭಾಗೆ ಅನೇಕ ಮನವಿಗಳು ಬರುತ್ತಿವೆ. ಇದಕ್ಕೆಲ್ಲಾ ನಾವು ಸಿದ್ಧರಾಗಿರಬೇಕು’ ಎಂದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿ.ಎಸ್.ಚಂದ್ರಶೇಖರ್, ‘ಜಿಲ್ಲೆಯಲ್ಲಿ 45 ಲಕ್ಷ ವಿಪ್ರರಿದ್ದಾರೆ. ಆದರೆ, ಸರ್ಕಾರ 15 ಲಕ್ಷ ಎಂದು ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಆ.30 ರೊಳಗೆ ಜಿಲ್ಲೆಯಲ್ಲಿ ಇರುವ ವಿಪ್ರರ ಸರ್ವೇ ನಡೆಸಲು ಕ್ರಮವಹಿಸಲಾಗಿದೆ. ಈಗಾಗಲೇ ಕೆಲವು ಹೋಬಳಿಗಳ ಸರ್ವೇ ಕಾರ್ಯ ಮುಗಿದಿದೆ. ಜಾತಿ ಸರ್ವೇಗೆ ಬಂದಾಗ ಉಪಪಂಗಡಗಳ ಹೆಸರು ಹೇಳದಿರಿ, ಬ್ರಾಹ್ಮಣ ಎಂದು ತಿಳಿಸಿ’ ಎಂದು ಮನವಿ ಮಾಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಪ್ರತಿನಿಧಿ ಆನಂದಮೂರ್ತಿ, ‘1998 ರಿಂದ ಜಿಲ್ಲಾ ಬ್ರಾಹ್ಮಣ ಸಂಘ ನಿಷ್ಕ್ರಿಯವಾಗಿತ್ತು, ಈ ಹಿನ್ನೆಲೆಯಲ್ಲಿ ಮಹಾಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ ಜಿಲ್ಲಾ ಮಹಾಸಭಾ ರಚಿಸಲಾಗಿದೆ. ವಿಪ್ರರಿಗೆ ಸಹಾಯಹಸ್ತ ಚಾಚುವ ಉದ್ದೇಶದಿಂದ ಸಾಮೂಹಿಕ ಉಪನಯನ, ವಟುಗಳಿಗೆ ವೇದ ಪಾಠ, ಸಂಸ್ಕೃತಿ ರಕ್ಷಣೆಗಾಗಿ ಪ್ರಯತ್ನ ನಡೆಸಿ, ಸಂಘಟನೆ, ಸ್ವಾವಲಂಬನೆ, ಸಂಸ್ಕಾರದ ನೆಲೆಗಟ್ಟಿನಲ್ಲಿ ಸಾಗುತ್ತೇವೆ ಎಂದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಗೌರವಾಧ್ಯಕ್ಷ ಕೆ.ವಿ.ನಾಗರಾಜ್, ‘ಬ್ರಾಹ್ಮಣ್ಯ ಉಳಿಸಿಕೊಂಡು ಹೋಗೋಣ. ಸಂಧ್ಯಾವಂದನೆ, ಅಗ್ನಿಕಾರ್ಯ, ಸಂಸ್ಕೃತಿ ಉಳಿಸುವ ಸಂಕಲ್ಪದೊಂದಿಗೆ ಕೆಲಸ ಮಾಡೋಣ’ ಎಂದು ಹೇಳಿದರು.

ರಘುನಾಥ್ ಸೇರಿದಂತೆ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಲಕ್ಷ್ಮೀಶ, ಜೆ.ಎನ್.ರಾಮಕೃಷ್ಣ, ಎಚ್.ಆರ್.ವೆಂಕಟೇಶ್, ಜಂಟಿ ಕಾರ್ಯದರ್ಶಿಗಳಾದ ಟಿ.ಕೆ.ವೆಂಕಟಾಚಲಪತಿ, ಶೇಷಗಿರಿರಾವ್, ವಲ್ಲಭಣ್ಣ, ಕೃಷ್ಣಮೂರ್ತಿ ಅವರನ್ನು ಅಭಿನಂದಿಸಲಾಯಿತು. ಕೆ.ಎನ್.ಶಶಿಧರ್, ವೈ.ಪಿ.ಅರುಣ, ಎಂ.ಎಸ್.ಶಿವಪ್ರಸಾದ್, ಸ್ಫೂರ್ತಿ ಮುರಳೀಧರ್, ಎಚ್.ಬಿ.ಭಾರ್ಗವಿ ಅರನ್ನು ಗೌರವಿಸಲಾಯಿತು.

ಹೊಳಲಿ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಸವಿನಯ್, ಖಜಾಂಚಿ ರವಿ, ಗೌರವ ಸಲಹೆಗಾರ ಎಸ್.ಜಯರಾವ್, ನಿರ್ದೇಶಕಕಿ ಸೌಜನ್ಯ, ರಾಜ್ಕುಮಾರ್, ಸಂಧ್ಯಾರಾವ್, ಮುರಳಿಧರರಾವ್, ಸತ್ಯನಾರಾಯಣರಾವ್ ಇದ್ದರು.

ಆರ್ಥಿಕವಾಗಿ ಹಿಂದುಳಿದವರ ಕೈಹಿಡಿಯುವ ಕಾರ್ಯದಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಜೈನರ ಸಂಘಟನೆ ಕಾರ್ಯ ಬ್ರಾಹ್ಮಣ ಸಮುದಾಯದವರಿಗೆ ಮಾದರಿಯಾಗಬೇಕು
ಎಸ್.ರಘುನಾಥ್ ಅಧ್ಯಕ್ಷ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.