ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಮೀಸಲು ಲೋಕಸಭಾ ಕ್ಷೇತ್ರ: ಕಣದಲ್ಲಿ 14 ಅಭ್ಯರ್ಥಿಗಳು

Last Updated 3 ಮೇ 2019, 11:10 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 20 ಅಭ್ಯರ್ಥಿಗಳ ಪೈಕಿ 6 ಮಂದಿ ಶುಕ್ರವಾರ ಉಮೇದುವಾರಿಕೆ ಹಿಂಪಡೆದಿದ್ದು, ಅಂತಿಮವಾಗಿ 14 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಒಟ್ಟಾರೆ 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 3 ಅಭ್ಯರ್ಥಿಗಳ ನಾಮಪತ್ರಗಳನ್ನು ವಿವಿಧ ಕಾರಣಕ್ಕೆ ಅಸಿಂಧುಗೊಳಿಸಲಾಗಿತ್ತು. ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದ ಶುಕ್ರವಾರ 6 ಮಂದಿ ಉಮೇದುವಾರಿಕೆ ಹಿಂಪಡೆದು ಚುನಾವಣಾ ಕಣದಿಂದ ಹಿಂದೆ ಸರಿದರು.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಪಕ್ಷೇತರ ಅಭ್ಯರ್ಥಿಗಳಾದ ಎಚ್.ವೆಂಕಟೇಶಪ್ಪ, ಡಿ.ವಿ.ಮುರಳೀಧರ, ಕೆ.ಎಂ.ಸಂದೇಶ್, ವೆಂಕಟರೆಡ್ಡಿ ಮತ್ತು ಎನ್‌.ವೆಂಕಟೇಶಪ್ಪ ನಾಮಪತ್ರ ವಾಪಸ್ ಪಡೆದರು.

ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಸಂಸದ ಕೆ.ಹೆಚ್.ಮುನಿಯಪ್ಪ, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ, ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜಯಪ್ರಸಾದ್, ಅಂಬೇಡ್ಕರ್ ಸಮಾಜ ಪಕ್ಷದ ಎಂ.ಬಿ.ಅಶೋಕ, ರಿಪಬ್ಲಿಕನ್ ಸೇನೆ ಪಕ್ಷದ ಜಿ.ಚಿಕ್ಕನಾರಾಯಣ, ಪ್ರಜಾಕೀಯ ಪಕ್ಷದ ಆರ್.ರಾಮಾಂಜಿನಪ್ಪ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ (ಆರ್‌ಪಿಐ) ವೆಂಕಟೇಶಪ್ಪ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಎನ್.ಎಂ.ಸರ್ವೇಶ್‌ ಅವರು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ.

ಜತೆಗೆ ಪಕ್ಷೇತರ ಅಭ್ಯರ್ಥಿಗಳಾದ ಎಂ.ಚಂದ್ರಶೇಖರ್, ಪಿ.ಮುನಿರಾಜಪ್ಪ, ವಿ.ಎಂ.ರಮೇಶ್‌ಬಾಬು, ಎಸ್.ರಾಜ್‌ಕುಮಾರ್, ಸಿ.ಶಂಕರಪ್ಪ, ಎನ್.ಸಿ.ಸುಬ್ಬರಾಯಪ್ಪ ಚುನಾವಣಾ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT