ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು | ಅಗ್ನಿಕುಂಡ ಪ್ರವೇಶ 34 ಮಂದಿಗೆ ಸುಟ್ಟ ಗಾಯ

Published 31 ಮೇ 2024, 23:40 IST
Last Updated 31 ಮೇ 2024, 23:40 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಕೆರಸಿಮಂಗಲ ಗ್ರಾಮದಲ್ಲಿ ಗುರುವಾರ ರಾತ್ರಿ ಅಗ್ನಿಕುಂಡ ಹಾಯುವಾಗ 34 ಮಂದಿಗೆ ಸುಟ್ಟ ಗಾಯ ಆಗಿದೆ.

ಚೌಡೇಶ್ವರಿ ದೀಪೋತ್ಸವ ಹಾಗೂ ಅಗ್ನಿಕುಂಡ ಪ್ರವೇಶ ಸಂಪ್ರದಾಯದಂತೆ 40 ವರ್ಷಗಳಿಂದ ಆಚರಿಸಲಾಗುತ್ತಿದೆ. ಎಂದಿನಂತೆ ಗುರುವಾರ ರಾತ್ರಿ ದೀಪೋತ್ಸವ ನಂತರ ಮಹಿಳೆಯರು ಹಾಗೂ ಪುರುಷರು ಅಗ್ನಿಕುಂಡ ಹಾಯ್ದ ಮೇಲೆ ಕಾಲುಗಳಿಗೆ ಸುಟ್ಟ ಗಾಯ ಆಗಿದೆ.

ಘಟನೆಯಲ್ಲಿ 34 ಮಂದಿಗೆ ಸಣ್ಣ ಪ್ರಮಾಣದಲ್ಲಿ ಕಾಲುಗಳು ಸುಟ್ಟಿವೆ. ಮೂವರು ಮಹಿಳೆಯರಿಗೆ ಹೆಚ್ಚು ಪ್ರಮಾಣದಲ್ಲಿ ಸುಟ್ಟಿವೆ. ನಂಗಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT