ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಮುಳಬಾಗಿಲು: ಒಬ್ಬ ರೈತನಿಗೆ 5 ಮೂಟೆ ಗೊಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಿಲು: ‘ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಸಮೃದ್ಧ ಬೆಳೆ ಬೆಳೆದಿದ್ದು ರಸಗೊಬ್ಬರ ಅಭಾವ ತಲೆದೋರಿದೆ. ಟಿಎಪಿಸಿಎಂಎಸ್‌ನಿಂದ ವಿವಿಧ ಮಾದರಿ ರಸಗೊಬ್ಬರವನ್ನು ರೈತರಿಗೆ ನೀಡುತ್ತಿದ್ದು, ಅವಶ್ಯಕತೆ ಇರುವಷ್ಟೇ ಖರೀದಿ ಮಾಡಿದರೆ ಇತರರಿಗೆ ಅನುಕೂಲವಾಗುತ್ತದೆ’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.

ಟಿಎಪಿಸಿಎಂಎಸ್ ಆವರಣದಲ್ಲಿ ಗುರುವಾರ ಮಾತನಾಡಿದ ಅವರು, ಯೂರಿಯಾ ಮತ್ತು ಡಿಎಪಿ ಗೊಬ್ಬರಕ್ಕೆ ಅಭಾವ ಉಂಟಾಗಿದೆ. ಆದರೆ, ಯೂರಿಯಾ ಬೇರೆ ಕಡೆಯಿಂದ ದಾಸ್ತಾನು ತರಿಸಲಾಗಿದೆ. ಪ್ರತಿ ಕುಟುಂಬಕ್ಕೆ ಒಂದು ಆಧಾರ್‌ ಕಾರ್ಡ್‌ ಸಂಖ್ಯೆ ಪಡೆದು, ಒಬ್ಬ ರೈತನಿಗೆ 5 ಮೂಟೆ ಯೂರಿಯಾ ಖರೀದಿಗೆ ಅವಕಾಶ ಮಾಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ, ₹ 33 ಕೋಟಿ ನಷ್ಟದಲ್ಲಿರುವ ಕೋಚಿಮುಲ್ ಇಬ್ಭಾಗ ಮಾಡಿದರೆ ನಷ್ಟವನ್ನು ಎರಡು ಒಕ್ಕೂಟಗಳು ಸಮಪಾಲು ಮಾಡಿಕೊಳ್ಳಬೇಕು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.