ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಉನ್ನತೀಕರಣಕ್ಕೆ ಕ್ರಮ

Last Updated 20 ನವೆಂಬರ್ 2019, 16:19 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜದ ದಿಕ್ಕನ್ನು ಬದಲಿಸುವ ಶಿಕ್ಷಣ ಉನ್ನತೀಕರಣಕ್ಕೆ ರೋಟರಿ ಸಂಸ್ಥೆ ಯೋಜನೆ ರೂಪಿಸಲಾಗಿದೆ’ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ವೆಂಕಟರವಣಪ್ಪ ತಿಳಿಸಿದರು.

ಇಲ್ಲಿನ ರೋಟರಿ ಭವನದಲ್ಲಿ ರೋಟರಿ ಸಂಸ್ಥೆಯಿಂದ ಬುಧವಾರ ಹಮ್ಮಿಕೊಂಡಿದ್ದ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜಿಲ್ಲೆಯ ೩೦೦ ಸರ್ಕಾರಿ ಶಾಲೆಗಳಿಗೆ ಬಯೋಸ್ಟಾಂಡ್ ಫಿಲ್ಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಆರೋಗ್ಯ ಹಾಗೂ ಪರಿಸರ ನೈರ್ಮಲ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಜತೆಗೆ ಖಾಲಿ ಜಾಗದಲ್ಲಿ ಸಸಿಗಳನ್ನು ನಡೆಲಾಗುತ್ತಿದ್ದು, ಇದಕ್ಕೆ ಸಾರ್ಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ರೋಟರಿ ಮಾಜಿ ಅಧ್ಯಕ್ಷ ದೇವರಾಜ್, ರಾಘವೇಂದ್ರ ಬಾಲಾಜಿ, ಕ್ಯಾನ್ ಅಧ್ಯಕ್ಷ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಡಾ.ಕೆಎಂಜೆ ಮೌನಿ, ಕಾರ್ಯದರ್ಶಿ ಸೋಮಶೇಖರ್, ರಾಮಚಂದ್ರೇಗೌಡ, ಪ್ರತಿಭಾ, ಸಂಪನ್ಮೂಲ ವ್ಯಕ್ತಿಗಳಾದ ಲಿಯಾನಾ, ಸೆಹಗಲ್ ಅಪರಾಜತ, ಗ್ರಾಮವಿಕಾಸ ಸಂಸ್ಥೆ ನಿರ್ದೇಶಕ ಎಂ.ವಿ.ಎನ್. ರಾವ್, ಕ್ಯಾನ್ ಕಾರ್ಯದರ್ಶಿಗಳಾದ ಚೌಡಪ್ಪ, ಸಿ.ಜಿ.ಮರಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT