ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಅಯ್ಯಪ್ಪ ಭಕ್ತಾದಿಗಳ ಬಸ್ ಪಲ್ಟಿ

ಕೇರಳದ ಕೊಟ್ಟಾಯಂ ಸಮೀಪದಲ್ಲಿ ಘಟನೆ, 19 ಮಂದಿಗೆ ಗಾಯ
Published 18 ಅಕ್ಟೋಬರ್ 2023, 12:44 IST
Last Updated 18 ಅಕ್ಟೋಬರ್ 2023, 12:44 IST
ಅಕ್ಷರ ಗಾತ್ರ

ಮುಳಬಾಗಿಲು: ಶಬರಿಮೆಲೆಗೆ ತೆರಳಿದ್ದ ಭಕ್ತರ ಬಸ್ ಕೇರಳದ ಕೊಟ್ಟಾಯಂ ಸಮೀಪದಲ್ಲಿ ಬುಧವಾರ ಮುಂಜಾನೆ ಪಲ್ಟಿ ಹೊಡೆದ ಪರಿಣಾಮ 17 ಮಂದಿಗೆ ಗಂಭೀರ ಗಾಯಗಳಾಗಿ, ಮೂವರ ಸ್ಥಿತಿ ಚಿಂತಾಜನಕವಾಗಿದೆ.

ತಾಲ್ಲೂಕಿನ ತಮ್ಮರೆಡ್ಡಿ ಹಳ್ಳಿ, ಬಂಗವಾದಿ ಹಾಗೂ ಎಂ.ಕೊತ್ತೂರು ಗ್ರಾಮದವರು ಈಚೆಗೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿ ಖಾಸಗಿ ಬಸ್ಸಿನಲ್ಲಿ 50 ಮಂದಿ ಭಕ್ತರು ಶಬರಮಲೆಗೆ ಹೊರಟಿದ್ದರು. ಆ ವೇಳೆ ಬಸ್ಸು ಕೇರಳದ ಪಂಪ ಸಮೀಪದ ಕೊಟ್ಟಾಯಂ ಬಳಿಯ ತಿರುವಿನಲ್ಲಿ ಏಕಾಏಕಿ ಪಲ್ಟಿ ಹೊಡೆದಿದೆ. ಬಸ್ಸಿನಲ್ಲಿದ್ದ 19 ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನು ಪಂಪ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದ ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್ ಕೋಲಾರ ಜಿಲ್ಲಾಧಿಕಾರಿಗಳ ಮೂಲಕ ಪಂಪ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರೆ, ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಗಾಯಾಳುಗಳನ್ನು ಕೋಲಾರ ಜಾಲಪ್ಪ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT