ಶನಿವಾರ, ಸೆಪ್ಟೆಂಬರ್ 24, 2022
24 °C

76ನೇ ಸ್ವಾತಂತ್ರ್ಯೋತ್ಸವ: ಕೋಲಾರದಲ್ಲಿ ಬೃಹತ್ ತ್ರಿವರ್ಣ ಧ್ವಜ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ದೇಶದಲ್ಲೇ ಅತಿ ದೊಡ್ಡದು ಎನ್ನಲಾದ ತ್ರಿವರ್ಣ ಧ್ವಜವನ್ನು ಇಲ್ಲಿನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಪ್ರದರ್ಶಿಸಲಾಯಿತು.

 205x630 ಅಡಿ ವಿಸ್ತೀರ್ಣದ ಧ್ವಜ ಇದಾಗಿದೆ. ಇಡೀ ಕ್ರೀಡಾಂಗಣದ ಉದ್ದಗಲಕ್ಕೆ ಆಗುತ್ತದೆ‌. ಧ್ವಜವು ಒಟ್ಟು 1.29 ಲಕ್ಷ ಚದರ ಅಡಿ ಇದ್ದು, ಅದರಲ್ಲಿ ಅಶೋಕ ಚಕ್ರವೇ 3,600 ಚದರ ಅಡಿ ಹೊಂದಿದೆ. 12,800 ಮೀಟರ್ ಬಟ್ಟೆ ಬಳಸಿದ್ದು, 3,200 ಕೆ.ಜಿ ತೂಕ ಹೊಂದಿದೆ. ಏಳು ಮಂದಿ ಟೈಲರ್‌ಗಳು, 15 ಸಹಾಯಕರು ಹಾಗೂ ಇಬ್ಬರು ಕಲಾವಿದರ ನೆರವಿನಿಂದ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಕೇವಲ ಏಳು ದಿನಗಳಲ್ಲಿ ನಿರ್ಮಿಸಲಾಗಿದೆ. 

ಈ ಧ್ವಜಕ್ಕೆ ಸೇನಾ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಲಾಯಿತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು