ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಹೋಬಳಿಯ ತುಮಟಗೆರೆ ಗ್ರಾಮದ ಬಳಿ ಜ.9ರಂದು ಬೈಕ್ ಅಡ್ಡಕಟ್ಟಿ ₹8 ಲಕ್ಷ ದರೋಡೆ ಮಾಡಿದ್ದ ಏಳು ಮಂದಿ ದರೋಡೆಕೋರರನ್ನು ಬೂದಿಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಗಾರಪೇಟೆ ತಾಲ್ಲೂಕಿನ ದಾಸರಹೊಸಹಳ್ಳಿಯ ಹರೀಶ್ ಕುಮಾರ್ (32), ಕೊಡಗುರ್ಕಿ ನಿವಾಸಿಗಳಾದ ನಾಗರಾಜ (29), ಕುಮಾರಸ್ವಾಮಿ (36) ಬೆಂಗಳೂರು ರಾಜಾಜಿನಗರದ ನಿವಾಸಿಗಳಾದ ಜಗದೀಶ್ (37), ವಿಜಯ್ (29), ಜೀವ ಅಲಿಯಾಸ್ ಜೀವನ್ (27), ಶ್ರೀನಿವಾಸಪುರ ತಾಲ್ಲೂಕಿನ ಸುನಕಲ್ ನಿವಾಸಿ ರಾಜೇಂದ್ರ (28) ಬಂಧಿತ ಆರೋಪಿಗಳು. ಬಂಧಿತರಿಂದ ₹6.50 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದರೋಡೆ ಪ್ರಕರಣವು ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ತನಿಖೆಗೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಡಿವೈಎಸ್ಪಿ ವಿ.ಲಕ್ಷ್ಮಯ್ಯ, ಕಾಮಸಮುದ್ರ ವೃತ್ತದ ಸಿಪಿಐ (ಪ್ರಭಾರ) ಮಾರ್ಕೊಂಡಯ್ಯ ಎಸ್.ಟಿ, ಕಾಮಸಮುದ್ರ ಪಿಎಸ್ಐ ಕಿರಣ್ ಕುಮಾರ್ ಬಿ.ವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.