ಗುರುವಾರ , ಡಿಸೆಂಬರ್ 3, 2020
23 °C

ನಿಂದಕರಿರಬೇಕು ಹಂದಿಯಂತೆ: ಸಚಿವ ಬಿ.ಸಿ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

bc patil minister

ಕೋಲಾರ: ಮಂಡ್ಯ ಜಿಲ್ಲೆ ಮಡುವಿನಕೋಡಿ ಗ್ರಾಮದಲ್ಲಿ ಕಾಳು ಕಟ್ಟಿರುವ (ಹೊಡೆ ಕಟ್ಟಿರುವ) ಭತ್ತದ ಬೆಳೆಗೆ ಗೊಬ್ಬರ ಹಾಕಿದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಟೀಕಿಸಿದವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ‘ನಿಂದಕರಿರಬೇಕು ಜಗದಲ್ಲಿ ಹಂದಿಯಂತೆ’ ಎಂದು ತಿರುಗೇಟು ನೀಡಿದ್ದಾರೆ.

ಇಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡುವ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟೀಕೆಗಳ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ ಅವರ ಸಿಟ್ಟು ಕಟ್ಟೆಯೊಡೆಯಿತು.

‘ರೀ ಸ್ವಾಮಿ... ರೈತನ ಮಗನಾದ ನನಗೂ ಕೃಷಿಯ ಪರಿಜ್ಞಾನವಿದೆ. ರೈತರನ್ನು ಪ್ರೇರೇಪಿಸುವ ಉದ್ದೇಶಕ್ಕಾಗಿ ಗದ್ದೆಗಿಳಿದು ಭತ್ತದ ಬೆಳೆಗೆ ಗೊಬ್ಬರ ಹಾಕಿದೆ. ಆ ಗದ್ದೆಯಲ್ಲಿನ ಭತ್ತದ ಕಾಳು ಇನ್ನೂ ಬಲಿತಿರಲಿಲ್ಲ’ ಎಂದು ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು