ಬುಧವಾರ, ಜೂನ್ 16, 2021
28 °C

ಶಾಲೆಯಲ್ಲಿ ಹುಟ್ಟುಹಬ್ಬ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ಶಾಲೆಯಲ್ಲಿ ಹುಟ್ಟುಹಬ್ಬದ ಅಂಗವಾಗಿ ಕಾರ್ಯಕ್ರಮ ನಡೆಸಿದ ಆರೋಪದ ಮೇರೆಗೆ ಒಬ್ಬನ ವಿರುದ್ಧ ಚಾಂಪಿಯನ್‌ ರೀಫ್ಸ್‌ ಪೊಲೀಸರು ಗುರುವಾರ ಪ್ರಕರಣ ದಾಖಲು ಮಾಡಿದ್ದಾರೆ.

ಚಾಂಪಿಯನ್‌ರೀಫ್ಸ್‌ನ ಸೇಂಟ್‌ ಜೋಸೆಫ್‌ ಕಾನ್ವೆಂಟ್‌ಗೆ ಸೇರಿದ ಶಾಲೆಯಲ್ಲಿ ಬೆಳಿಗ್ಗೆ ಕಮಲ್ ಕಣ್ಣನ್ ತನ್ನ ಹುಟ್ಟುಹಬ್ಬದ ಅಂಗವಾಗಿ ಪಾರ್ಟಿ ಆಯೋಜನೆ ಮಾಡಿದ್ದನು. ಶಾಲೆಯ ಸಿಬ್ಬಂದಿ ಮತ್ತು ಸ್ನೇಹಿತರು ಭಾಗವಹಿಸಿದ್ದರು. ವಿಷಯ ತಿಳಿದ ಚಾಂಪಿಯನ್ ರೀಪ್ಸ್‌ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಆನಂದಬಾಬು ಮತ್ತು ತಂಡದವರು ದಾಳಿ ನಡೆಸಿದರು. ಕಾರ್ಯಕ್ರಮ ಆಯೋಜನೆ ಮಾಡಿದ್ದ ಕಮಲ್‌ ಕಣ್ಣನ್ ಮೇಲೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಪ್ರಕರಣ ದಾಖಲು ಮಾಡಿದ್ದಾರೆ.

ರಾಬರ್ಟಸನ್‌ಪೇಟೆಯ ಬಿ.ಎಂ.ರಸ್ತೆಯಲ್ಲಿ ಫರ್ನಿಚರ್ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ನವಾಜ್‌ ಮತ್ತು ಆರೀಫ್ ಎಂಬುವರ ಮೇಲೆ ರಾಬರ್ಟಸನ್‌ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು